ಸಮರಸ ಚಿತ್ರ ಸುದ್ದಿ: ಮುಳ್ಳೇರಿಯ: ಆದೂರು ಅಂಬಿಕಾ ನಗರದ ಅಂಬಿಕಾ ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್(ಎಎಎಸ್‍ಸಿ) ಇದರ ಆಶ್ರಯದಲ್ಲಿ ಶಿವಾಜಿ ಜಯಂತಿಯ ಅಂಗವಾಗಿ ನಡೆದ ವೀರ ಶಿವಾಜಿ ಟ್ರೋಫಿ-2021 ಕ್ರಿಕೆಟ್ ಪಂದ್ಯಾವಳಿಯ ಮೂಲಕ ಸಂಗ್ರಹಿಸಿದ ರೂ.10ಸಾವಿರವನ್ನು ಹೃದಯ ಸಂಬಂಧಿ ರೋಗದಿಂದ ಬಳಲುತ್ತಿರುವ ಅಂಬಿಕಾನಗರ ಪರಿಸರದ ಉಮಾವತಿ ಅವರ ಚಿಕಿತ್ಸೆಗಾಗಿ ನೀಡಲಾಯಿತು. ಈ ಸಂದರ್ಭದಲ್ಲಿ ಕ್ಲಬ್ಬಿನ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.