ಕುಂಬಳೆ: ಪುತ್ತಿಗೆ ಗ್ರಾಮ ಪಂಚಾಯತಿಯಲ್ಲಿ ಡೆಂಗೆ ಜ್ವರ ವಿರುದ್ಧ ಪ್ರತಿರೋಧ ಚಟುವಟಿಕೆ ನಡೆಸಲಾಯಿತು.
ಗ್ರಾಮ ಪಂಚಾಯತಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಇತರ ಇಲಾಖೆಗಳು, ಕುಟುಂಬಶ್ರೀ, ಎಂ.ಜಿ.ಎಲ್.ಆರ್.ಇ.ಜಿ.ಎ., ಹರಿತ ಕ್ರಿಯಾ ಸೇನೆ, ತೋಟಗಳ ಮಾಲೀಕರು ಜಂಟಿಯಾಗಿ ಈ ಚಟುವಟಿಕೆ ನಡೆಸಿದರು. ಮಳೆಗಾಲಕ್ಕೆ ಮುನ್ನ ನಡೆಸಲಾಗುವ ಶುಚೀಕರಣ ಚಟುವಟಿಕೆಗಳ ಸಲುವಾಗಿ "ತೋಟಗಳಿಗೆ ತೆರಳೋಣ" ಎಂಬ ಕಾರ್ಯಕ್ರಮಗಳ ಅಂಗವಾಗಿ ಚಕ್ಕಣಿಕೆ ಬಾಲಸುಬ್ರಹ್ಮಣ್ಯ ಭಟ್ ಅವರ ಅಡಕೆ ತೋಟದಲ್ಲಿ ಸೊಳ್ಳೆ ಉತ್ಪಾದನೆ ಕೇಂದ್ರಗಳ ನಿವಾರಣೆ ಮೂಲಕ ಗ್ರಾಮ ಪಂಚಾಯತಿ ಅಧ್ಯಕ್ಷ ಸುಬ್ಬಣ್ಣ ಆಳ್ವ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಪಾಲಾಕ್ಷ ರೈ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಜಯಂತಿ, ಕಲ್ಯಾಣ ಸ್ಥಾಯೀ ಸಮಿತಿ ಅಧ್ಯಕ್ಷೆ ಅನಿತಾ ಎಂ., ಜನಪ್ರತಿನಿಧಿಗಳಾದ ಪ್ರೇಮಾ ಪಿ., ಕಾವ್ಯಶ್ರೀ, ಅನಿತಾಶ್ರೀ, ಕೃಷಿ ಅಧಿಕಾರಿ ಷಂಸೀನಾ, ವಿ.ಇ.ಒ.ಜಾನ್ ಸನ್, ಆಶಾ ಕಾರ್ಯಕರ್ತೆಯರು, ಎಂ.ಜಿ.ಎಲ್.ಆರ್.ಇ.ಜಿ.ಎಸ್, ಕುಟುಂಬಶ್ರೀ, ಹರಿತ ಕ್ರಿಯಾ ಸೇನೆಯ ಕಾರ್ಯಕರ್ತರು, ವಿವಿಧ ಕ್ಲಬ್ ಗಳ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು. ವೈದ್ಯಾಧಿಕಾರಿ ಡಾ.ಗೋಪಾಲಕೃಷ್ಣ ಸಿ.ಎಚ್.ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಜೆ.ಎಚ್.ಐ.ಮೋಹನನ್ ಕೆ.ಎಂ.ಸ್ವಾಗತಿಸಿ, ಗ್ರಾಮ ಪಂಚಾಯತಿ ಸಹಾಯಕ ಕಾಯದರ್ಶಿ ಥಾಮಸ್ ವಿ.ಪಿ. ವಂದಿಸಿದರು.