ಪತ್ತನಂತಿಟ್ಟು: ವಿಶು ಹಬ್ಬದ ಹಿನ್ನೆಲೆಯಲ್ಲಿ ಶಬರಿಮಲೆ ದೇವಸ್ಥಾನದ ಬಾಗಿಲು ತೆರೆಯಲಾಯಿತು.ತಂತ್ರಿವರ್ಯ ಕಂಠರರ್ ಮೋಹನರ್ ಅವರ ನೇತೃತ್ವದಲ್ಲಿ ಪ್ರಧಾನ ಅರ್ಚಕ ವಿ.ಕೆ. ಜಯರಾಜ ಪೆÇೀತಿ ಅವರು ದೀಪವನ್ನು ಬೆಳಗಿಸಿದರು. ಭಾನುವಾರ ಬೆಳಿಗ್ಗೆಯಿಂದ ಭಕ್ತರಿಗೆ ಪ್ರವೇಶಿಸಲು ಅವಕಾಶವಿದೆ.
ದಿನಕ್ಕೆ ಸುಮಾರು 10,000 ಜನರಿಗೆ ಪ್ರವೇಶ ಅವಕಾಶ ನೀಡಲಾಗಿದೆ. ವರ್ಚುವಲ್ ಕ್ಯೂ ಮೂಲಕ ಪ್ರವೇಶ ಕಾಯ್ದಿರಿಸಿದ್ದಾರೆ. ವ್ಯಾಕ್ಸಿನೇಶನ್ ಎರಡನೇ ಹಂತ ಪೂರ್ತಿಯಾದವರಿಗೆ ಪ್ರವೇಶಾವಕಾಶ ನೀಡಲಾಗಿದೆ. ಲಸಿಕೆಯ ಎರಡು ಪ್ರಮಾಣವನ್ನು ತೆಗೆದುಕೊಳ್ಳದವರು 48 ಗಂಟೆಗಳ ಒಳಗೆ ಆರ್‍ಟಿಪಿಸಿ ಆರ್ ವರದಿ ನೀಡಬೇಕು. ಸಿಆರ್ ಪರೀಕ್ಷೆಯೊಂದಿಗೆ ನಕಾರಾತ್ಮಕ ಪ್ರಮಾಣಪತ್ರ ಇರಬೇಕು.