HEALTH TIPS

ವಿಧಾನಸಭಾ ಚುನಾವಣೆ:ಮತ ಎಣಿಕೆಗೆ ಇನ್ನು ಮೂರು ದಿನಗಳು! ಚುನಾವಣಾ ಫಲಿತಾಂಶ ಪ್ರಕಟಣೆ ಈ ಬಾರಿ ವಿಳಂಬ ಸಾಧ್ಯತೆ

                                   

                  ತಿರುವನಂತಪುರ: ವಿಧಾನಸಭೆ ಚುನಾವಣಾ ಫಲಿತಾಂಶದ ಮತಗಣನೆಗೆ ಇನ್ನು ಕೇವಲ ಮೂರು ದಿನಗಳು ಬಾಕಿ ಇದೆ. ಈ ಬಾರಿ ಸುಮಾರು 3.5 ಲಕ್ಷ ಅಂಚೆ ಮತಗಳನ್ನು ಎಣಿಸಬೇಕಾಗಿದ್ದು, ಫಲಿತಾಂಶಗಳ ಪ್ರಕಟಣೆ ಎಂದಿನಂತಿರದೆ ವಿಳಂಬವಾಗಬಹುದು ಎಂದು ಅಂದಾಜಿಸಲಾಗಿದೆ. ಚುನಾವಣಾ ಆಯೋಗವು ಈ ಹಿಂದೆ ತಿಳಿಸಿರುವಂತೆ ಕೇರಳದಲ್ಲಿ ಈ ಬಾರಿ 'ಎಂಕೋರ್' ಎಣಿಕೆಯ ನಿರ್ವಹಣಾ ವ್ಯವಸ್ಥೆಯನ್ನು ಬಳಸುತ್ತಿದೆ.

              ಕಳೆದ ವರ್ಷದ ಬಿಹಾರ ಚುನಾವಣೆಯ ಫಲಿತಾಂಶಗಳನ್ನು ತಿಳಿಯಲು ಎಂಕೋರ್ ನ್ನು ಬಳಸಲಾಗಿತ್ತು. ಮತ ಗಣನೆಯ ಕೇಂದ್ರಗಳಿಂದ ಎನ್ ಕೋರ್‍ಗೆ ಮಾಹಿತಿಯನ್ನು ಅಪ್‍ಲೋಡ್ ಮಾಡಲಾಗುತ್ತದೆ. ಈ ಮೂಲಕ ಚುನಾವಣಾ ಫಲಿತಾಂಶವನ್ನು ಮಾಧ್ಯಮಗಳಿಗೆ ನೀಡಲು ಆಯೋಗ ನಿರ್ಧರಿಸಿದೆ. ಆದಾಗ್ಯೂ, ಎನ್ಕೋರ್ ಮೂಲಕ ಮಾಹಿತಿಯ ಲಭ್ಯತೆಯು ಸ್ವಲ್ಪ ವಿಳಂಬವಾಗುವ ಸಾಧ್ಯತೆಯಿದೆ.

                ಪ್ರತಿ ಬೂತ್ ಮಟ್ಟದಲ್ಲಿ ಎಣಿಸಿದಾಗ ಎನ್ಕೋರ್ ವ್ಯವಸ್ಥೆಗೆ ಮಾಹಿತಿಯನ್ನು ಸೇರಿಸುವುದು ಇದರ ವಿಶೇಷತೆಯಾಗಿದೆ. ಆದರೆ ಪ್ರತಿ ಸುತ್ತನ್ನು ಎಣಿಸಿದ ನಂತರವೇ ಮಾಹಿತಿಯನ್ನು ಎನ್‍ಕೋರ್‍ನಲ್ಲಿ ಅಪ್‍ಲೋಡ್ ಮಾಡಲಾಗುತ್ತದೆ.

        ಇದೇ ವೇಳೆ ಸುಮಾರು 3.5 ಲಕ್ಷ ಅಂಚೆ ಮತಗಳ ಎಣಿಕೆಯು ಫಲಿತಾಂಶಗಳು ಘೋಷಣೆಯನ್ನು ವಿಳಂಬಗೊಳಿಸುತ್ತದೆ. ಅಂಚೆ ಮತ ಎಣಿಕೆ ಕೋಷ್ಟಕಗಳನ್ನು ಒಂದರಿಂದ ದ್ವಿಗುಣಗೊಳಿಸಲಾಗಿದೆ. ಒಂದು ಕೋಷ್ಟಕದಲ್ಲಿ 500 ಮತಗಳನ್ನು ಎಣಿಸಲಾಗುತ್ತದೆ. ಆದಾಗ್ಯೂ, ಅಂಚೆ ಮತಗಳು ಎಣಿಸಲು ಸಮಯ ತೆಗೆದುಕೊಳ್ಳುತ್ತದೆ.

                ಎಣಿಕೆ ಕೇಂದ್ರಗಳಲ್ಲಿ ಸಭಾಂಗಣಗಳ ಸಂಖ್ಯೆಯನ್ನೂ ಹೆಚ್ಚಿಸಲಾಗಿದೆ. ಸಭಾಂಗಣದಲ್ಲಿ ಏಳು ಟೇಬಲ್‍ಗಳಿವೆ. 21 ಬೂತ್‍ಗಳ ಮತಗಳನ್ನು ಒಂದೇ ಸುತ್ತಿನಲ್ಲಿ ಎಣಿಸಲಾಗುವುದು. ಈ ರೀತಿಯ 12 ರಿಂದ 16 ಸುತ್ತುಗಳು ಇರಲಿವೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries