ಕಲ್ಪೆಟ್ಟ: ರಾಹುಲ್ ಗಾಂಧಿ ವಯನಾಡ್ ನಿಂದ ಕೋಝಿಕ್ಕೋಡ್ ಹೆಲಿಪ್ಯಾಡ್‍ಗೆ ತೆರಳಲು ಆಟೋರಿಕ್ಷಾ ಆಯ್ಕೆ ಮಾಡಿ ಗಮನ ಸೆಳೆದಿದ್ದಾರೆ. ಬೆಂಗಾವಲು ವಾಹನಗಳ ನಡುವೆ ರಾಹುಲ್ ಆಟೋರಿಕ್ಷಾದಲ್ಲಿ ಸವಾರಿ ಮಾಡಿದ್ದು, ಕಲ್ಪೆಟ್ಟಾದ ಶೆರಿಫ್ ಎಂಬವರ ಅಟೋದಲ್ಲಿ ರಾಹುಲ್ ಹೆಲಿಪ್ಯಾಡ್ ಗೆ ಪ್ರಯಾಣಿಸಿದರು.
ವಾಹನ ಚಾಲಕರ ಜೀವನವನ್ನು ಅರ್ಥಮಾಡಿಕೊಳ್ಳಲು ಮತ್ತು ಅವರ ಪರಿಸ್ಥಿತಿಗಳನ್ನು ಹತ್ತಿರದಿಂದ ನೋಡಲು ರಾಹುಲ್ ಆಟೋ ಯಾತ್ರೆಯನ್ನು ಬಳಸಿದರು. ಇಂಧನ ಬೆಲೆ ಹೆಚ್ಚಳ, ಆದಾಯ, ಕುಟುಂಬ ಮತ್ತು ಜೀವನ ಪರಿಸ್ಥಿತಿಗಳ ಬಗ್ಗೆ ರಾಹುಲ್ ಆಟೋ ಚಾಲಕನನ್ನು ಕೇಳಿದರು.
ಅವರೊಂದಿಗೆ ಎರಡೂವರೆ ಗಂಟೆಗಳಷ್ಟು ಮಾತನಾಡಿದ ಬಳಿಕ ರಾಹುಲ್ ಕೈಕುಲುಕಿ ವಿದಾಯ ಹೇಳಿದರು. ಕೆ.ಸಿ.ವೇಣುಗೋಪಾಲ್ ಮತ್ತು ಟಿ ಸಿದ್ದೀಕ್ ಕೂಡ ರಾಹುಲ್ ಅವರೊಂದಿಗೆ ಅಟೋದಲ್ಲಿದ್ದರು. ಯುಡಿಎಫ್ ಅಧಿಕಾರಕ್ಕೆ ಬಂದರೆ ನ್ಯಾಯ ದೊರಕುತ್ತದೆ ಎಂದು ಭರವಸೆ ನೀಡಿ ರಾಹುಲ್ ಸಂವಾದವನ್ನು ಕೊನೆಗೊಳಿಸಿದರು.
ಕೆಸಿ ವೇಣುಗೋಪಾಲ್ ಇಬ್ಬರ ನಡುವಿನ ಸಂಭಾಷಣೆಯನ್ನು ಅನುವಾದಿಸಿದರು. ಟಿ. ಸಿದ್ದಿಕ್ ಗೆಲುವಿಗಾಗಿ ರಾಜಕೀಯ ಪ್ರಚಾರಕ್ಕೆ ನಿನ್ನೆ ರಾಹುಲ್ ಕಲ್ಪೆಟ್ಟಕ್ಕೆ ಭೇಟಿ ನೀಡಿದ್ದರು.