ವರ್ತಮಾನದ ಕಾಲದ ಆರೋಗ್ಯ ವಲಯದ ಸವಾಲುಗಳ ಮಧ್ಯೆ ಜನಸಾಮಾನ್ಯರು ಮತ್ತೆ ಪಾರಂಪರಿಕ ಚಿಕಿತ್ಸಾ ವ್ಯವಸ್ಥೆ, ಯೋಗ-ಆಯುರ್ವೇದಗಳತ್ತ ಆಸಕ್ತರಾಗುತ್ತಿದ್ದಾರೆ. ಆಧುನಿಕ ಚಿಂತನೆ, ವ್ಯವಸ್ಥೆಗಳ ಅಡಿಯಲ್ಲಿ ಜನಪ್ರಿಯ ವ್ಯವಸ್ಥೆಗಳೊಂದಿಗೆ ಭಾರತೀಯ ಚಿಕಿತ್ಸಾ ವ್ಯವಸ್ಥೆಗಳೂ ಬದಲಾಗುತ್ತಿದೆ.
ಈ ನಿಟ್ಟಿನಲ್ಲಿ ಕಾಸರಗೋಡು ಪಾರೆಕಟ್ಟೆಯ ಯುವ ವೈದ್ಯೆ ಡಾ.ಅಶ್ವಿನಿ ಅವರು ಯೋಗ ಮತ್ತು ಆಹಾರ ಸಮತೋಲನ ವ್ಯವಸ್ಥೆ(ಡಯಟಿಂಗ್) ಗಳ ಬಗ್ಗೆ ಉನ್ನತ ಅಧ್ಯಯನಗಳೊಂದಿಗೆ ಜನರ ಸೇವೆಗೆ ಲಭ್ಯರಿದ್ದು, ಈ ಬಗ್ಗೆ ನಿಖರವಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ. ಸಮರಸ ಸುದ್ದಿಯು ವೀಕ್ಷಕರಿಗಾಗಿ ಡಾ.ಅಶ್ವಿನಿ ಅವರೊಂದಿಗೆ ನಡೆಸಿದ ಮುಕ್ತ ಸಂವಾದದ ಆಯ್ದ ಭಾಗಗಳನ್ನು ವೀಕ್ಷಿಸಬಹುದು. ಸಹೃದಯರು ವೀಕ್ಷಿಸಿ ಅಭಿಪ್ರಾಯ ವ್ಯಕ್ತಪಡಿಸಬೇಕೆಂದು ವಿನಂತಿ