ತಿರುವನಂತಪುರ: ಕೋವಿಡ್ 19 ವ್ಯಾಪಕತೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ರಾತ್ರಿ ಕಫ್ರ್ಯೂ ಮಂಗಳವಾರದಿಂದ ಆರಂಭಗೊಂಡಿದೆ. ನಿನ್ನೆ ರಾತ್ರಿ 9 ರಿಂದ ಕಫ್ರ್ಯೂ ಜಾರಿಗೆ ಬಂದಿತು. ಪೋಲೀಸರು ಕಠಿಣ ತನಿಖೆ ನಡೆಸಿದರು. ಮುಂಜಾನೆ 5 ಗಂಟೆಯವರೆಗೆ ಕಫ್ರ್ಯೂ ಮೊದಲ ದಿನ ಮುಕ್ತಾಯಗೊಂಡಿತು. ಜನಸಂದಣಿ ಮತ್ತು ಅನಗತ್ಯ ಪ್ರವಾಸಗಳಿಗೆ ಅವಕಾಶ ನೀಡದಿರಲು ನಿರ್ಬಂಧ ಹೇರಿದ ಹಿನ್ನೆಲೆಯಲ್ಲಿ ಕಪ್ರ್ಯೂ ಆರಂಭಿಸಲಾಗಿದೆ.
ಸಾರ್ವಜನಿಕ ಸಾರಿಗೆ ಮತ್ತು ಸರಕು ಸೇವೆಗೆ ರಾತ್ರಿ ಕಫ್ರ್ಯೂನಿಂದ ವಿನಾಯಿತಿ ನೀಡಲಾಗಿದೆ. ಜನರು ಹೊರಗೆ ತೆರಳುವುದು(ಅಡ್ಡಾಡುವುದು) ಮತ್ತು ಜನಸಂದಣಿಯನ್ನು ನಿಯಂತ್ರಿಸುವುದು ರಾತ್ರಿ ಕಫ್ರ್ಯೂ ಉದ್ದೇಶವಾಗಿದೆ ಮತ್ತು ಜನರು ಈ ಬಗ್ಗೆ ಸಂಪೂರ್ಣ ಸಹಕರಿಸಬೇಕು ಎಂದು ಪೋಲೀಸರು ತಿಳಿಸಿದ್ದಾರೆ. ಹಿರಿಯ ಪೋಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಪೆಟ್ರೋಲಿಂಗ್ ಕೂಡ ಹೆಚ್ಚಾಗಿದೆ.
ಕೊರೋನಾ ಮಾನದಂಡಗಳನ್ನು ಪೂರೈಸದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕಾನೂನು ವಿಧಿಸುತ್ತದೆ. ಕಣ್ಣೂರು, ಕಾಸರಗೋಡು, ಮಲಪ್ಪುರಂ, ಪಾಲಕ್ಕಾಡ್ ಮತ್ತು ಕೊಟ್ಟಾಯಂ ಎಂಬ ಐದು ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುವುದು ಎಂದು ಡಿಜಿಪಿ ತಿಳಿಸಿದ್ದಾರೆ. ಇವು ಟಿಪಿಆರ್ ದರ 20 ಕ್ಕಿಂತ ಹೆಚ್ಚಿರುವ ಜಿಲ್ಲೆಗಳಾಗಿವೆ.