ಕಾಸರಗೋಡು: ತ್ರಿಕರಿಪುರ ಶಾಸಕ ಎಂ.ರಾಜಗೋಪಾಲನ್ ಮಂಗಳವಾರ ಮತದಾನ ನಡೆಸಿದರು. ತ್ರಿಕರಿಪುರ ವಿಧಾನಸಭೆ ಕ್ಷೇತ್ರದ ಕಯ್ಯೂರು ಪೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯ ಮತಗಟ್ಟೆ ನಂಬ್ರ 30 ಎ ಯಲ್ಲಿ ಬೆಳಗ್ಗೆ 7 ಗಂಟೆಗೆ ಪ್ರಥಮ ಮತದಾನವನ್ನು ಅವರು ನಡೆಸಿದರು. ಅವರು ತ್ರಿಕರಿಪುರ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿಯೂ ಆಗಿದ್ದಾರೆ.
ಕಂದಾಯ ಸಚಿವರಿಂದ ಮತದಾನ
ಕಂದಾಯ ಸಚಿವ ಇ.ಚಂದ್ರಶೇಖರನ್ ಮಂಗಳವಾರ ಮತದಾನ ನಡೆಸಿದರು. ಉದುಮಾ ವಿಧಾನಸಭೆ ಕ್ಷೇತ್ರದ ಕೋಳೀಯಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 33ನೇ ಮತಗಟ್ಟೆಯಲ್ಲಿ ಬೆಳಗ್ಗೆ 7.15ಕ್ಕೆ ಅವರು 6 ನೇ ಮತದಾತರಾಗಿ ಮತಚಲಾಯಿಸಿದರು.
ಶಾಸಕ ಎನ್.ಎ.ನೆಲ್ಲಿಕುನ್ನು ಮತದಾನ
: ಶಾಸಕ ಎನ್.ಎ.ನೆಲ್ಲಿಕುನ್ನು ಮಂಗಳವಾರ ಮತದಾನ ನಡೆಸಿದರು. ಬೆಳಗ್ಗೆ 8.20ಕ್ಕೆ ನೆಲ್ಲಿಕುಂಜೆ ಸರಕಾರಿ ಹೆಣ್ಣುಮಕ್ಕಳ ಶಾಲೆಯ 143ನೇ ನಂಬ್ರ ಮತಗಟ್ಟೆಯಲ್ಲಿ ಅವರು ಮತದಾತರಲ್ಲಿ 53ನೇ ವ್ಯಕ್ತಿಯಾಗಿ ಮತಚಲಾಯಿಸಿದರು.