ಮಂಜೇಶ್ವರ: ಸೇವಾ ರಂಗದಿಂದ ನಿವೃತ್ತರಾದ ಅಧ್ಯಾಪಕ ಜಯಂತ ಕೆ ಹಾಗೂ ಬ್ಯಾಂಕಿಂಗ್ ಸೇವೆಯಿಂದ ನಿವೃತ್ತರಾದ ಶ್ರೀಪತಿ ಕಡಂಬಳಿತ್ತಾಯ ಅವರನ್ನು ಮಂಜೇಶ್ವರ ಗೋವಿಂದ ಪೈ ಸ್ಮಾರಕ ಗಿಳಿವಿಂಡು ಆವರಣದಲ್ಲಿ ಮಂಜೇಶ್ವರ ನಾಗರಿಕ ಬಂಧುಗಳಿಂದ ಇತ್ತೀಚೆಗೆ ಸನ್ಮಾನಿಸಲಾಯಿತು.
ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ್ ವಿ ಅಧ್ಯಕ್ಷತೆ ವಹಿಸಿದ್ದರು. ಗೋವಿಂದ ಪೈ ಸ್ಮಾರಕ ಸಮಿತಿ ಕಾರ್ಯದರ್ಶಿ ಕೆ.ಆರ್.ಜಯಾನಂದ, ಕೇರಳ ನ್ಯಾಯ ಪ್ರಾಧಿಕಾರದ ದಿನೇಶ್ ಕೊಡಂಗೆ ಉಪಸ್ಥಿತರಿದ್ದು ನಿವೃತ್ತರಿಗೆ ಶುಭಹಾರೈಸಿದರು. ಬಾಲಕೃಷ್ಣ ಮಾಸ್ತರ್ ಸ್ವಾಗತಿಸಿ, ವಂದಿಸಿದರು.