ಬದಿಯಡ್ಕ: ಬದಿಯಡ್ಕ ಮಂಡಲ ಕಾಂಗ್ರೆಸ್ಸಿನ ನೂತನ ಕಚೇರಿಯನ್ನು ಜಿಲ್ಲಾ ಕಾಂಗ್ರೆಸ್ಸ್ ಅಧ್ಯಕ್ಷ ಹಕೀಮ್ ಕುನ್ನಿಲ್ ಸೋಮವಾರ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಕೇರಳದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಸಂಶಯವಿಲ್ಲ. ಅಧಿಕಾರ ಬಂದಕೂಡಲೇ ಕಾಸರಗೋಡು ಉಕ್ಕಿನಡ್ಕ ಮೆಡಿಕಲ್ ಕಾಲೇಜಿನ ಕೆಲಸವನ್ನು ತಕ್ಷಣ ಮುಗಿಸಿ ಮಡಿಕಲ್ ಕಾಲೇಜ್ ಪ್ರಾರಂಭ ಮಾಡಲಾಗುವುದೆಂದು ಭರವಸೆಯಿತ್ತರು.
ಬದಿಯಡ್ಕ ಮಂಡಲ ಕಾಂಗ್ರೆಸ್ ಅಧ್ಯಕ್ಷ ನಾರಾಯಣ ನೀರ್ಚಾಲು ಅಧ್ಯಕ್ಷತೆ ವಹಿಸಿದ್ದರು. ಮಂಡಲ ಕಾಂಗ್ರೆಸ್ಸಿನ ಹಿರಿಯ ನೇತಾರ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಪಿ.ಜಿ. ಚಂದ್ರ ಹಾಸ ರೈ, ಬದಿಯಡ್ಕ ಪಂಚಾಯತಿ ಉಪಾಧ್ಯಕ್ಷ ಅಬ್ಬಾಸ್, ಕುಂಜಾರು ಮೊಹಮ್ಮದ್ ಹಾಜಿ, ತಿರುಪತಿ ಕುಮಾರ್ ಭಟ್, ಚಂದ್ರಹಾಸ ಮಾಸ್ತರ್, ದಲಿತ ಕಾಂಗ್ರೆಸ್ ನೇತಾರ ಐತಪ್ಪ ಚೆನ್ನೆ ಗುಳಿ ,ಯೂತ್ ಕಾಂಗ್ರೆಸ್ ನೇತಾರರಾದ ಮ್ಯಾಥ್ಯೂ ಬದಿಯಡ್ಕ, ಶಾಫಿ ಗೋಳಿಯಡ್ಕ ಮೊದಲಾದವರು ಮಾತನಾಡಿದರು. ಬದಿಯಡ್ಕ ಮಂಡಲ ಕಾಂಗ್ರೆಸ್ ಉಪಾಧ್ಯಕ್ಷ ಪಿ.ಜಿ. ಜಗನ್ನಾಥ ರೈ ಸ್ವಾಗತಿಸಿ ಶಾಮ್ ಪ್ರಸಾದ್ ಮಾನ್ಯ ವಂದಿಸಿದರು.