HEALTH TIPS

ವಿಧಾನಸಭೆ ಚುನಾವಣೆ: ಆಹಾರ ಪೂರೈಸಿದ ಕುಟುಂಬಶ್ರೀಗೆ ಉತ್ತಮ ಆದಾಯ

                  ಕಾಸರಗೋಡು: ವಿಧಾನಸಭಾ ಚುನಾವಣೆಯಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿಗೆ ಹೊತ್ತಿನ ಆಹಾರ ಪೂರೈಕೆ ನಡೆಸಿ ಕುಟುಂಬಶ್ರೀ ಶ್ಲಾಘನೆಗೆ ಪಾತ್ರವಾದುದಲ್ಲದೆ, ಈ ಮೂಲಕ ಉತ್ತಮ ಆದಾಯವನ್ನೂ ಗಳಿಸಿದೆ.

      ಚುನಾವಣೆಯ ವಿವಿಧ ಹಂತಗಳಲ್ಲಿ ಆಹಾರ ಪೂರೈಕೆ ಮೂಲಕ ಈ ಬಾರಿ ಕುಟುಂಬಶ್ರೀ ಒಟ್ಟು 45,16,474 ರೂ. ಆದಾಯ ಗಳಿಸಿದೆ. ಚುನಾವಣೆಯ ಕರ್ತವ್ಯದ ಸಿಬ್ಬಂದಿಗೆ, ತರಬೇತಿ ಒದಗಿಸಲಾಗುತ್ತಿದ್ದ ಕೇಂದ್ರಗಳಿಗೆ, ಚುನಾವಣಾ ಸಾಮಗ್ರಿ ವಿತರಣಾ ಕೇಂದ್ರಗಳಿಗೆ ಆಹಾರ ಪೂರೈಕೆ ಮಾಡುವ ಹೊಣೆವಹಿಸಿಕೊಂಡಿದ್ದ ಕುಟುಂಬಶ್ರೀ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ ತರಬೇತಿ ಕೇಂದ್ರಗಳಿಗೆ ತನ್ನ ವಿವಿಧ ಉದ್ದಿಮೆ ಗುಂಪುಗಳ ಮೂಲಕ 3 ಹೊತ್ತಿನ ಆಹಾರವನ್ನು ವಿತರಿಸಿದೆ. ಇದಕ್ಕಾಗಿ ತನ್ನ 15 ಗುಂಪುಗಳ ಮೂಲಕ

      ವೈವಿಧ್ಯಮಯ ಆಹಾರದ ಸ್ಟಾಲ್ ಗಳನ್ನು ಈ ಕೇಂದ್ರಗಳ ಬಳಿ ನಡೆಸಿತ್ತು. ಬೆಳಗ್ಗೆ 7 ರಿಂದ ಮಧ್ಯಾಹ್ನ 3 ಗಂಟೆ ವರೆಗೆ ಈ ಸ್ಟಾಲ್‍ಗಳಲ್ಲಿ ಆಹಾರ ವಿತರಣೆ ನಡೆಸಲಾಗಿತ್ತು. ಎರಡು ದಿನಗಳ ಅವಧಿಯಲ್ಲಿ ಈ ಸ್ಟಾಲ್ ಗಳ ಮೂಲಕ ಕುಟುಂಬಶ್ರೀ 409,773 ರೂ. ಆದಾಯ ಗಳಿಸಿತ್ತು. ನಂತರ 1591 ಮತಗಟ್ಟೆಗಲ್ಲಿ ತನ್ನ 2622 ಸದಸ್ಯೆಯರನ್ನು ಸಿ.ಡಿ.ಎಸ್ ಮುಖಾಂತರ ಸಜ್ಜುಗೊಳಿಸಿ

     ಕರ್ತವ್ಯದಲ್ಲಿರುವ ಸಿಬ್ಬಂದಿಗೆ ಆಹಾರ ಒದಗಿಸಿದೆ. ಈ ಮೂಲಕ 26,18,410 ರೂ. ಲಭ್ಯವಾಗಿದೆ. 1504 ಕುಟುಂಬಶ್ರೀ ಕಾರ್ಯಕರ್ತರೆಯರು , 992 ಮಂದಿ ಹಸಿರು ಕ್ರಿಯಾ ಸೇನೆ ಸದಸ್ಯೆಯರೊಂದಿಗೆ ಹೆಗಲು ನೀಡಿ ಶುಚೀಕರಣದ ಜೊತೆಗೆ ತ್ಯಾಜ್ಯ ಸಂಗ್ರಹ ನಡೆಸಿದ್ದಾರೆ. ಈಮೂಲಕ 14,88,291 ರೂ. ಕೂಡ ಲಭಿಸಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries