ತಿರುವನಂತಪುರ: ನೂತನ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕವಷ್ಟೇ ಮುಂದಿನ ಶೈಕ್ಷಣಿಕ ವರ್ಷವನ್ನು ಪ್ರಾರಂಭಿಸುವ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಶಿಕ್ಷಣ ಇಲಾಖೆ ಹೇಳಿದೆ.
ಕೋವಿಡ್ ವ್ಯಾಪಕತೆಯ ಪ್ರಸ್ತುತ ಪರಿಸ್ಥಿತಿಯಲ್ಲಿ ಜೂನ್‍ನಲ್ಲಿ ಶಾಲೆಗಳು ಮತ್ತೆ ತೆರೆಯುವ ಸಾಧ್ಯತೆಯಿಲ್ಲ ಮತ್ತು ಕೋವಿಡ್ ಇಳಿಮುಖವಾದರೆ ಶಾಲೆಗಳನ್ನು ಪುನರಾರಂಭಿಸಲು ಯಾವುದೇ ಅಡೆತಡೆಗಳು ಉಂಟಾಗದು ಎಂದು ಶಿಕ್ಷಣ ಇಲಾಖೆ ಹೇಳಿದೆ.
ಎಸ್‍ಎಸ್‍ಎಲ್‍ಸಿ ಮತ್ತು ಪ್ಲಸ್ ಟು ಪರೀಕ್ಷೆಗಳು ಪ್ರಸ್ತುತ ನಡೆಯುತ್ತಿವೆ. ಅಡೆತಡೆಯಿಲ್ಲದೆ ಇವುಗಳನ್ನು ಪೂರ್ಣಗೊಳಿಸುವುದು ಈಗಿರುವ ಲಕ್ಷ್ಯವಾಗಿದೆ. ಕೋವಿಡ್ ಹೆಚ್ಚಳಗೊಂಡ ಹಿನ್ನೆಲೆಯಲ್ಲಿ ಕಠಿಣ ಭದ್ರತಾ ಕ್ರಮಗಳ ಅಡಿಯಲ್ಲಿ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಜೂನ್‍ನಲ್ಲಿ ಫಲಿತಾಂಶಗಳನ್ನು ಪ್ರಕಟಿಸುವ ನಿರೀಕ್ಷೆಯಿದೆ. ಮುಂದಿನ ಅಧ್ಯಯನ ವರ್ಷ ಜೂನ್ ನಿಂದಲೇ ಆರಂಭಿಸುವ ಬಗ್ಗೆ ಕಳವಳವಿದೆ. ಕೋವಿಡ್ ಮತ್ತೊಮ್ಮೆ ತೀವ್ರಗೊಂಡ ಕಾರಣ, ಹೊಸ ಸರ್ಕಾರ ಅಧಿಕಾರ ವಹಿಸಿಕೊಂಡ ನಂತರ ಶಾಲೆಗಳ ಪುನರಾರಂಭದ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಇಲಾಖೆ ನಿರ್ಧರಿಸಿದೆ.