ಮಂಜೇಶ್ವರ: ತಲೇಕಳ ಶ್ರೀ ಸದಾಶಿವ ರಾಮವಿಠಲ ದೇಗುಲದಲ್ಲಿ ವಿಷುಕಣಿ ಪರ್ವದ ಹೊಸವರ್ಷ ದಿನದಂದು ವಿಶೇಷವಾಗಿ ವೈದಿಕ ಧಾರ್ಮಿಕ ಕಾರ್ಯಕ್ರಮಗಳನ್ನು ಜರಗಿಸಿ ಕಲ್ಪತರು ಫಲಗಳೊಂದಿಗೆ ಫಲವಸ್ತು ಹೂ ತರಕಾರಿಗಳನ್ನು ಇರಿಸಿ ಸಾಮೂಹಿಕಾಗಿ ಪಾರ್ಥಿಸಿ ಪೂಜಿಸಿ ಪಂಚಾಂಗ ಶ್ರವಣ, ಭಜನಾ ಸೇವೆಗಳು ನಡೆಯಿತು.
ಪರ್ವದ ಅಂಗವಾಗಿ ಶ್ರೀ ಕ್ಷೇತ್ರದಲ್ಲಿ ಕ್ಷೇತ್ರದ ಮೊಕ್ತೇಸರ ಹಾಗೂ ಪವಿತ್ರ ಪಾಣಿ ವೇ.ಮೂ.ಯಸ್.ವಾಸುದೇವ ಭಟ್ ಅವರ ನೇತೃತ್ವದಲ್ಲಿ ವಿ. ಶಿವರಾಜ ಇವರ ಸಹಭಾಗಿತ್ವದೊಂದಿಗೆ ಪರಿವಾರ ದೇವತೆಗಳಾದ ಶ್ರೀ ಮಹಾಗಣಪತಿ, ಶ್ರೀ ರಾಮ ವಿಠಲ, ಶ್ರೀ ನಾಗದೇವರು, ವನಶಾಸ್ತಾರ, ಗುರು ವೃಂದಾವನದಲ್ಲಿ ವಿಶೇಷ ಪೂಜೆಗಳನ್ನು ನಡೆಸಲಾಯಿತು. ಶ್ರೀ ಕ್ಷೇತ್ರದ ಪ್ರಧಾನ ಕ್ಷೇತ್ರಾಧಿಪತಿಯಾದ ಶ್ರೀ ಸದಾಶಿವ ದೇವರ ಸನ್ನಿಧಿಯಲ್ಲಿ ಪರ್ವದ ಪ್ರಯುಕ್ತ ವಿಶೇಷವಾಗಿ ಕ್ಷೀರ ದಧಿ ಘೃತ ಮಧು ಶರ್ಕರಾಗಳೆಂಬ ಐದು ದ್ರವ್ಯ ವಸ್ತುಗಳಿಂದ ಪಂಚಾಮೃತಾಭಿಷೇಕ ಮಾಡಿ ಜಲ ಗಂಧ ಪುಷ್ಪ ನಾಳಿಕೇರ ಜಲಾಧಾರೆಯೊಂದಿಗೆ ರುದ್ರಾಭಿಷೇPದ ಏಕಾದಶ ರುದ್ರಾಭಿಷೇಕ ಸೇವೆಯನ್ನು ಸಲ್ಲಿಸಲಾಯಿತು.