ತಿರುವನಂತಪುರ: ಕೊರೋನಾ ವಿಸ್ತರಣೆಯ ಹಿನ್ನೆಲೆಯಲ್ಲಿ ಬ್ಯಾಂಕುಗಳ ಕೆಲಸದ ಸಮಯವನ್ನು ಬುಧವಾರದಿಂದ ಬದಲಾಯಿಸಲಾಗುತ್ತಿದೆ. ಇಂದಿನಿಂದ ಮೊದಲ್ಗೊಂಡು ಮುಂದಿನ ಆದೇಶ ಬರುವವರೆಗೆ ಬ್ಯಾಂಕುಗಳ ಕೆಲಸದ ಸಮಯ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ರ ವರೆಗೆ ಇರಲಿದೆ.
ಕೊರೊನಾ ವ್ಯಾಪಕಗೊಂಡ ಹಿನ್ನೆಲೆಯÀಲ್ಲಿ ಕೆಲಸದ ಸಮಯವನ್ನು ಬದಲಾಯಿಸುವಂತೆ ಬ್ಯಾಂಕರ್ಸ್ ಒಕ್ಕೂಟಗಳು ಬೇಡಿಕೆ ಸಲ್ಲಿಸಿದ್ದವು. ಈ ವಿಷಯವನ್ನು ಪರಿಗಣಿಸಿದ ಸಂಘಗಳ ಜಂಟಿ ಸಮಿತಿ ಮುಖ್ಯಮಂತ್ರಿಗೆ ಪತ್ರವನ್ನು ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಪರಿಷ್ಕøತ ಕರ್ತವ್ಯ ಮಾರ್ಗಸೂಚಿ ಪ್ರಕಟಿಸಿತು.
ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕೆಲಸದ ದಿನಗಳನ್ನು ವಾರದಲ್ಲಿ 5 ದಿನಗಳಿಗೆ ಇಳಿಸಬೇಕು ಮತ್ತು ಅಗತ್ಯ ಶಾಖೆಗಳನ್ನು ಮಾತ್ರ ತೆರೆಯಲು ಅವಕಾಶ ನೀಡಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿತ್ತು.