ತಿರುವನಂತಪುರ: ಕೇರಳ ವಿಧಾನಸಭೆಯ ಒಟ್ಟು 140ಸ್ಥಾನಗಳ ಪೈಕಿ ಎಡರಂಗ 73ರಿಂದ 83 ಸೀಟುಗಳಲ್ಲಿ ಗೆಲುವು ಸಾಧಿಸುವ ಬಗ್ಗೆ ಚುನಾವಣಾಪೂರ್ವ ಸಮೀಕ್ಷೆಗಳಲ್ಲಿ ಕೆಲವೊಂದು ಸುದ್ದಿವಾಹಿನಿಗಳು ಅಭಿಪ್ರಾಯ ವ್ಯಕ್ತಪಡಿಸಿತ್ತು.
ಆದರೆ, ಕಾಂಗ್ರೆಸ್ 70ರಿಂದ 80 ಸ್ಥಾನಗಳನ್ನು ಗೆದ್ದು ಅಧಿಕಾರ ಗದ್ದುಗೆ ಏರುವ ವಿಶ್ವಾಸ ವ್ಯಕ್ತಪಡಿಸಿದೆ. ಇದಕ್ಕೆ ಕಾರಣವನ್ನೂ ನೀಡುತ್ತಿದೆ. ಆಡಳಿತ ವಿರೋಧಿ ಅಲೆ ರಾಜ್ಯದಲ್ಲಿದೆ. ಶಬರಿಮಲೆ ವಿವಾದ, ಚಿನ್ನ ಕಳ್ಳಸಾಗಾಟ, ಪಿಎಸ್‍ಸಿ ನೇಮಕಾತಿಯಲ್ಲಿ ಅವ್ಯವಹಾರ, ಆಳಸಮುದ್ರ ಒಪ್ಪಂದದಲ್ಲಿ ಭ್ರಷ್ಟಾಚಾರ, ಪೊಲೀಸ್ ಕಸ್ಟಡಿ ಮರಣ, ಯುಎಪಿಎ ಬಂಧನ, ಸ್ಪ್ರಿಂಕ್ಲರ್ ವಿವಾದ ಹೀಗೆ ಹತ್ತು ಹಲವು ಆರೋಪಗಳು ಎಡರಂಗಸರ್ಕಾರದ ಮೇಲಿರುವುದರಿಂದ ಇದು ಗೆಲುವಿಗೆ ಸಹಕಾರಿಯಾಗಲಿರುವುದಾಗಿ ಐಕ್ಯರಂಗ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನು ಎಡರಂಗ ಸರ್ಕಾರದ ಸಾಧನೆ ಆಡಳಿತ ಮುಂದುವರಿಕೆಗೆ ಸಹಕಾರಿಯಾಗಲಿದೆ ಎಂಬುದಾಗಿ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಸಾಮಾಜಿಕ ಕಲ್ಯಾಣ ಪಿಂಚಣಿ ಯೋಜನೆ, ಎಲ್ಲ ನಾಗರಿಕರಿಗೆ ಕಿಟ್ ವಿತರಣೆ, ಕೋವಿಡ್, ಮಹಾಪ್ರಳಯ ಸಂದಿಗ್ಧತೆಯ ಸಮರ್ಥ ನಿರ್ವಹಣೆ ಸರ್ಕಾರದ ಸಾಧನೆಯನ್ನಾಗಿ ಪರಿಗಣಿಸಲಾಗಿದೆ.