ಮಂಜೇಶ್ವರ: ಯಕ್ಷಧ್ರುವ ಪಟ್ಲ ಫೌಂಡೇಶನ್ ಮಂಗಳೂರು ಇದರ ಉಪ್ಪಳ ಘಟಕ ವತಿಯಿಂದ ಅರಸು ಸಂಕಲ ಕಲಾ ಪ್ರತಿಷ್ಠಾನ ಸಂತಡ್ಕ ಇದರ ಸಹಯೋಗದೊಂದಿಗೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಇವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಹಾಗೂ ಯುವ ಬಣ್ಣದ ವೇಷಧಾರಿ ಮನೀಶ್ ಪಾಟಾಳಿ ಎಡನೀರು ಅವರಿಗೆ ಗಣ್ಯರ ಸಮಕ್ಷಮ ಸನ್ಮಾನ ಇತ್ತೀಚೆಗೆ ಶ್ರೀ ಅರಸು ಸಂಕಲ ದೈವ ಕ್ಷೇತ್ರ ಸಂತಡ್ಕದ ವಠಾರದಲ್ಲಿ ಜರಗಿತು.
ಮುಂಬೈ ಉದ್ಯಮಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಯಕ್ಷಗಾನದ ಪ್ರಾಯೋಜಕತ್ವ ವಹಿಸಿದ್ದರು. ಶ್ರೀಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಕೊಂಡೆಯೂರು ಶ್ರೀಗಳು ಅರಸು ಸಂಕಲ ಕಲಾ ಪ್ರತಿಷ್ಠಾನವನ್ನು ಉದ್ಘಾಟಿಸಿದರು. ಪ್ರತಿಷ್ಠಾನ ಕಲೆ ಹಾಗೂ ಸಾಂಸ್ಕøತಿಕ ಚಟುವಟಿಕೆ ನಡೆಸುವ ಉದ್ದೇಶ ಹೊಂದಿರುತ್ತದೆ.
ಸಮಾರಂಭದಲ್ಲಿ ಶ್ರೀ ಗುರುದೇವಾನಂದ ಸ್ವಾಮೀಜಿ ಶ್ರೀ ಕ್ಷೇತ್ರ ಒಡಿಯೂರು, ಹಾಗೂ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಕೊಂಡೆಯೂರು ಶ್ರೀಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಅರಸುಸಂಕಲ ದೈವಕ್ಷೇತ್ರ ಸಂತಡ್ಕ ಇದರ ಸೇವಾಸಮಿತಿ ಅಧ್ಯಕ್ಷರಾದ ಡಾ.ಶ್ರೀಧರ ಭಟ್ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ, ಯಕ್ಷಧ್ರುವ ಪಟ್ಲ ಪೌಂಡೇಶನ್ ಕೇಂದ್ರ ಸಮಿತಿ ಅಧ್ಯಕ್ಷÀ ಸತೀಶ ಶೆಟ್ಟಿ ಪಟ್ಲ, ಯಕ್ಷಧ್ರುವ ಪಟ್ಲ ಫೌಂಡೇಶನ್ ಉಪ್ಪಳ ಘಟಕದ ಗೌರಾವಧ್ಯಕ್ಷ ಪಿ ಆರ್ ಶೆಟ್ಟಿ ಪೊಯ್ಯೇಲು, ಶ್ರೀ ಅಯ್ಯಪ್ಪ ಭಜನಾ ಮಂದಿರ ಬಾಳಿಯೂರು ಇದರ ಸಂಚಾಲಕರಾದ ಡಾ.ಜಯಪ್ರಕಾಶನಾರಾಯಣ ತೊಟ್ಟೆತ್ತೋಡಿ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಭೆಯಲ್ಲಿ ನೇಪಥ್ಯ ಕಲಾವಿದ ನಾರಾಯಣ ಪುರುಷ ಸಜಂಕಿಲ ಅವರಿಗೆ ಗೌರವಾರ್ಪಣೆಯೊಂದಿಗೆ ಧನಸಹಾಯ ನೀಡಲಾಯಿತು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಉಪ್ಪಳ ಘಟಕದ ಸಂಚಾಲಕರಾದ ಯೋಗೀಶ ರಾವ್ ಚಿಗುರುಪಾದೆ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿ, ಜಯಪ್ರಕಾಶ ಶೆಟ್ಟಿ ಅಂಗಡಿದಾರು ಸನ್ಮಾನಪತ್ರ ವಾಚಿಸಿದರು. ಅಧ್ಯಾಪಕ ಅರವಿಂದಾಕ್ಷ ಭಂಡಾರಿ ದಡ್ಡಂಗಡಿ ಕಾರ್ಯಕ್ರಮ ನಿರ್ವಹಿಸಿದರು.