ಕಣ್ಣೂರು; ಕೇರಳದಲ್ಲಿ ಬಿಜೆಪಿ ನಾಯಕg ದಂಡು ಬೀಡುಬಿಟ್ಟಿರುವ ಬಗ್ಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತೀವ್ರ ಅಸಮಧಾನ ಹೊರಹಾಕಿದ್ದಾರೆ.
ಆರ್ಎಸ್ಎಸ್ ಚುನಾವಣೆಯನ್ನು ಹಾನಿಗೊಳಿಸುತ್ತದೆ. ಕೇರಳದ ಜಾತ್ಯತೀತ ಮನಸ್ಸು ಹೊಸ ಅವಕಾಶವಾದಿ ಮೈತ್ರಿಕೂಟದ ಭ್ರಮೆಯನ್ನು ಅರೇಬಿಯನ್ ಸಮುದ್ರಕ್ಕೆ ಎಸೆಯುತ್ತದೆ ಎಂದು ಮುಖ್ಯಮಂತ್ರಿ ಕಣ್ಣೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಈ ಮಣ್ಣಿನಲ್ಲಿ ಆರ್ಎಸ್ಎಸ್ ಬೆಳೆಯಲು ಸಾಧ್ಯವಿಲ್ಲ. ಕೇರಳದಲ್ಲಿ ಬಿಜೆಪಿಗೆ ಒಂದೇ ಇಂದು ಸ್ಥಾನ ಈ ಬಾರಿ ಲಭ್ಯವಾಗದು. ಹಾಗಿದ್ದೂ ಬಿಜೆಪಿ ನಾಯಕರು ಕೇರಳದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿರುವುದು ಯಾಕೆ ಎಮದು ಅವರು ಪ್ರಶ್ನಿಸಿದರು?
ಎಲ್ಲಾ ಕ್ಷೇತ್ರಗಳಲ್ಲೂ ಕೇರಳ ಮುಂದಿದೆ ಮತ್ತು ಈ ಬಗ್ಗೆ ಎಲ್ಲರೂ ಚರ್ಚಿಸಲು ಹಿಂಜರಿಯುತ್ತಾರೆ ಎಂದು ಪಿಣರಾಯಿ ಹೇಳಿದರು.