HEALTH TIPS

ಇಂದು `ಕಾಸರಗೋಡಿನ ಕಟ್ಟಗಳು' ಏಷ್ಯಾನೆಟ್‍ನಲ್ಲಿ

 

            ಬದಿಯಡ್ಕ: ಏಷ್ಯಾನೆಟ್ ಮಲಯಾಳಂ ದೃಶ್ಯಮಾಧ್ಯಮ `ಕೃಷಿದೀಪಂ' ಕಾರ್ಯಕ್ರಮದಲ್ಲಿ ಇಂದು(ಏಪ್ರಿಲ್ 10, ಶನಿವಾರ) ಬೆಳಗ್ಗೆ 7.30 ಕ್ಕೆ `ಕಾಸರಗೋಡನ್ ಕಟ್ಟಗಳ್ - ಜಲಸಂಭರಣತ್ತಿಂಡೆ ಜನಮುನ್ನೇಟ್ಟಮ್' ಎಂಬ ಅರ್ಧ ಗಂಟೆಯ ಸಾಕ್ಷ್ಯಚಿತ್ರ ಪ್ರಸಾರವಾಗಲಿದೆ. ಈ ಸಾಕ್ಷ್ಯಚಿತ್ರ ಜಿಲ್ಲೆಯ ಏತಡ್ಕದ ಕೃಷಿಕರು ಶತಮಾನದಿಂದ ಜನಸಭಾಗಿತ್ವದೊಂದಿಗೆ ಕಟ್ಟುವ ಸಾಂಪ್ರದಾಯಿಕ ಕಟ್ಟಗಳ ಮೇಲೆ ಬೆಳಕು ಚೆಲ್ಲಲಿದೆ. ಕುಂಬ್ಡಾಜೆ ಪಂಚಾಯತಿನ ಏತಡ್ಕದ ಸುತ್ತಮುತ್ತ 15ಕ್ಕೂ ಹೆಚ್ಚು ದೊಡ್ಡ ಸಾಂಪ್ರದಾಯಿಕ ಕಟ್ಟಗಳನ್ನು ಕೃಷಿಕರೇ ಕಟ್ಟುತ್ತಾರೆ. ಇದಕ್ಕೆ ಸರ್ಕಾರದಿಂದ ಯಾವುದೇ ಸಹಾಯ ಸಿಗುತ್ತಿಲ್ಲ. ಈ ಕಟ್ಟಗಳ ಒಟ್ಟು ಮರುಕಳಿಸುವ ವೆಚ್ಚ ವರ್ಷಕ್ಕೆ ರೂ 20 ಲಕ್ಷದಷ್ಟು ಬರುತ್ತದೆ. ಈ ಕಟ್ಟಗಳ ಪೈಕಿ ಅತಿ ದೊಡ್ಡದಾದ ಬೇರ್ಕಡವು ಕಟ್ಟ 12 ಕೋಟಿ ಲೀಟರ್ ನೀರನ್ನು ಸಂಗ್ರಹಿಸುತ್ತದೆ. ಈ ಕಟ್ಟದ ಖರ್ಚು ವರ್ಷಕ್ಕೆ 2 ಲಕ್ಷ ರೂಪಾಯಿ. ಕಟ್ಟಗಳು ಅಡಿಕೆ ತೋಟಕ್ಕೆ ನೀರಾವರಿಗೆ ಮಾತ್ರವಲ್ಲದೆ ಹೊಳೆಯ ಇಕ್ಕೆಲದ ಬಹುದೂರದ ವರೆಗಿನ ಕುಟುಂಬಗಳ ಹಲವು ಅಗತ್ಯಗಳಿಗೆ ನೀರನ್ನು ಪೂರೈಸುತ್ತವೆ. ಕೇರಳ- ಕರ್ನಾಟಕಗಳಲ್ಲಿ ಕೃಷಿಕ ಸಮುದಾಯ ಇಷ್ಟೊಂದು ಶ್ರದ್ಧೆಯಿಂದ ಒಂದು ಪ್ರದೇಶದಲ್ಲಿ ಭಾರೀ ಸಂಖ್ಯೆಯ ಕಟ್ಟ ಕಟ್ಟುತ್ತಿರುವ ಬೇರೆ ಉದಾಹರಣೆಗಳಿಲ್ಲ. ಭಾನುವಾರ (ಏಪ್ರಿಲ್ 11) ದಂದು ಬೆಳಗ್ಗೆ 7.30ಕ್ಕೆ ಮತ್ತೆ ಈ ಕಾರ್ಯಕ್ರಮ ಮರುಪ್ರಸಾರಗೊಳ್ಳಲಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries