ಕೋಝಿಕ್ಕೋಡು: ಕಾರ್ಗೊ ಬೋಗಿಯಲ್ಲಿ ಬೆಂಕಿ ಅವಘಡದ ಬಗ್ಗೆ ಮುನ್ನೆಚ್ಚರಿಕೆ ಸೂಚನೆ ಬಂದ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಕೇರಳದ ಕೋಝಿಕ್ಕೋಡಿನಲ್ಲಿ ಶುಕ್ರವಾರ ಬೆಳಗ್ಗೆ ತುರ್ತು ಲ್ಯಾಂಡಿಂಗ್ ಆಗಿದೆ.
17 ಪ್ರಯಾಣಿಕರಿದ್ದ ವಿಮಾನ ಕಲ್ಲಿಕೋಟೆಯಿಂದ ಕುವೈತ್ ಗೆ ಹೊರಟಿತ್ತು ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.
ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದ ಕಾರ್ಗೊ ಬೋಗಿಯಲ್ಲಿ ಬೆಂಕಿ ಅವಘಡದ ಸೂಚನೆ ಪೈಲಟ್ ಗೆ ಸಿಕ್ಕಿದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ಕೋಝಿಕ್ಕೋಡಿನಲ್ಲಿ ಇಂದು ಬೆಳಗ್ಗೆ ತುರ್ತು ಲ್ಯಾಂಡಿಂಗ್ ಆಗಿದೆ. 17 ಪ್ರಯಾಣಿಕರಿದ್ದ ವಿಮಾನ ಕಲ್ಲಿಕೋಟೆಯಿಂದ ಕುವೈತ್ ಗೆ ಹೊರಟಿತ್ತು ಎಂದು ವಕ್ತಾರರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿ ಸಿಗಬೇಕಿದೆ.