ಕಾಸರಗೋಡು: ಕಾಸರಗೋಡು ಜಿಲ್ಲಾ ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘದ 88 ನೇ ವಾರ್ಷಿಕ ಮಹಾಸಭೆ ಬೀರಂತಬೈಲ್‍ನ ಶ್ರೀ ಭಿಕ್ಷು ಲಕ್ಷ್ಮಣಾನಂದ ಸ್ವಾಮೀಜಿ ಸ್ಮಾರಕ ಸಮಾಜ ಭÀವನದಲ್ಲಿ ನಡೆಯಿತು.
ಸಭೆಯಲ್ಲಿ ಸಂಘದ ಅಧ್ಯಕ್ಷ ಬಿ.ಪಿ.ವೆಂಕಟರಮಣ ಅಧ್ಯಕ್ಷತೆ ವಹಿಸಿ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಘ ಸ್ಥಾಪಕ ಶ್ರೀ ಭಿಕ್ಷು ಲಕ್ಷ್ಮಣಾನಂದ ಸ್ವಾಮೀಜಿಯವರ ಪುಣ್ಯ ಸ್ಮರಣೆಯ ಬಳಿಕ ಸಂಘದ ಜಿಲ್ಲಾ ಕಾರ್ಯದರ್ಶಿ ಲೋಕೇಶ್ ಕುಮಾರ್ ವಾರ್ಷಿಕ ವರದಿ ಮಂಡಿಸಿದರು. ಜಿಲ್ಲಾ ಕೋಶಾಧಿಕಾರಿ ಬಿ.ರಾಮಮೂರ್ತಿ ಲೆಕ್ಕಪತ್ರ ಮಂಡಿಸಿದರು. ವಿವಿಧ ಉಪ ಸಂಘಗಳ ವಾರ್ಷಿಕ ವರದಿಯನ್ನು ಅಧ್ಯಕ್ಷರು/ಕಾರ್ಯದರ್ಶಿಗಳು ಮಂಡಿಸಿದರು.
ಇದೇ ಸಂದಭರ್Àದಲ್ಲಿ ಅತ್ಯುತ್ತಮ ಸೇವೆಗಾಗಿ ರಾಷ್ಟ್ರಪತಿ ಪದಕ ಪಡೆದ ಮಂಗಳೂರು ಪೋಲೀಸ್ ಕಮಿಷನರೇಟ್‍ನ ಕಂಟ್ರೋಲ್ ರೂಂನ ವೈರ್‍ಲೆಸ್ ವಿಭಾಗದ ಸಬ್ ಇನ್‍ಸ್ಪೆಕ್ಟರ್ ಕೆ.ಜಯಪ್ರಕಾಶ್ ಕುಂಬಳೆ, ಕಾಸರಗೋಡು ನಗರಸಭೆಗೆ ಕೌನ್ಸಿಲರ್‍ಗಳಾಗಿ ಆಯ್ಕೆಯಾದ ವರಪ್ರಸಾದ್ ಕೋಟೆಕಣಿ, ಪವಿತ್ರ ಕೆ.ಜಿ. ಮತ್ತು ರಂಜಿತ ಡಿ. ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು.
ಸಭೆಯಲ್ಲಿ ನೂತನ ಆಡಳಿತ ಸಮಿತಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಜೊತೆ ಕಾರ್ಯದರ್ಶಿ ಪ್ರೇಂ ಕಿಶೋರ್ ಸ್ವಾಗತಿಸಿ, ವಂದಿಸಿದರು.