ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ನಡೆದ ವಿಧಾನಸಭೆ ಕ್ಷೇತ್ರದ ಚುನಾವಣೆ ವೇಳೆ ಮತಗಟ್ಟೆಗಳ ಶುಚೀಕರಣ ನಿಟ್ಟಿನಲ್ಲಿ ಹರಿತ ಕ್ರಿಯಾ ಸೇನೆ ಕ್ರಿಯಾಶೀಲವಾಗಿ ಕಾರ್ಯಾಚರಿಸಿದೆ. ಭಾನುವಾರದಿಂದಲೇ ಮತಗಣನೆ ಕೇಂದ್ರ, ಮತಗಟ್ಟೆ ಗಳನ್ನು ರೋಗಾಣುಮುಕ್ತಗೊಳಿಸುವ ಮೂಲಕ ಇವರು ಕಾಕ ಆರಂಭಿಸಿದ್ದರು. ಕೋವಿಡ್ ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ಕೋವಿಡ್ ಬಾಧಿತರಿಗೆ ಒದಗಿಸಲಾದ ಗ್ಲೌಸ್ ಇತ್ಯಾದಿಗಳನ್ನು ಸಂಸ್ಕರಣೆ ನಡೆಸುವಲ್ಲಿಂದ ಜೈವಿಕ-ಅಜೈವಿಕ ತ್ಯಾಜ್ಯ ಸಂಸ್ಕರಣೆ ನಡೆಸುವವರೆಗೆ ಇವರು ಹೊಣೆ ನಿರ್ವಹಿಸಿದ್ದಾರೆ.
ಒಂದು ಮತಗಟ್ಟೆಗೆ ತಲಾ ಒಬ್ಬರಂತೆ ಎಲ್ಲ ಮತಗಟ್ಟೆಗಳಲ್ಲೂ ಹರಿತ ಕ್ರಿಯಾ ಸೇನೆಯ ಸದಸ್ಯರು ಸೇವೆ ಸಲ್ಲಿಸಿದ್ದಾರೆ. ಕುಟುಂಬಶ್ರೀ ಕಾರ್ಯಕರ್ತರೂ ವಿವಿಧ ಚಟುವಟಿಕೆಗಳಲ್ಲಿ ಇವರಿಗೆ ಹೆಗಲು ನೀಡಿದ್ದಾರೆ.