HEALTH TIPS

ಚುನಾವಣೆ ಹೊಸ್ತಿಲಲ್ಲಿ ಯೆಚೂರಿ ಸಿಡಿಸಿದ ಶಬರಿಮಲೆ ಪರಾಮರ್ಶೆ ಸರ್ಕಾರಕ್ಕೆ ಬೂಮರಾಂಗ್ ಆಗಲಿದೆ!: ಗುಪ್ತಚರ ವರದಿ?

                                              

           ತಿರುವನಂತಪುರ: ರಾಜ್ಯದ ಎರಡೂ ರಂಗಗಳ ನಿರ್ಣಾಯಕ ವಿಧಾನಸಭಾ ಚುನಾವಣೆಯಲ್ಲಿ 'ಶಬರಿಮಲೆ ಪರಿಣಾಮ' ಪ್ರತಿಫಲಿಸುತ್ತದೆ ಎಂದು ಗುಪ್ತಚರ ವರದಿಯೊಂದು ತಿಳಿಸಿದೆ. ಪ್ರತಿ ಕ್ಷೇತ್ರದಲ್ಲಿ ಸರ್ಕಾರದ ವಿರುದ್ಧ 6,000 ಮತಗಳನ್ನು ಚಲಾಯಿಸಲಾಗಿದೆ ಎಂದು ಅಂದಾಜಿಸಲಾಗಿದೆ. ವರದಿ ಸರಿಯಾಗಿದ್ದರೆ, ಅದು ಎಡ ಆಡಳಿತ ಸಾಧ್ಯತೆಗಳನ್ನು ತಳ್ಳಲಿದೆ. ಇದು ಯುಡಿಎಫ್‍ಗೆ ಪ್ರಯೋಜನವನ್ನು ನೀಡಲಿದೆ ಎಂದೇ ವಿಶ್ಲೇಶಿಸಲಾಗಿದೆ. 

               ಚುನಾವಣಾ ಅಭಿಯಾನದ ಆರಂಭದಿಂದಲೂ, ಎಡಪಂಥೀಯರು ಶಬರಿಮಲೆ ವಿವಾದ ಚುನಾವಣಾ ವಿಷಯವಾಗಿ ವಕ್ಕರಿಸದಿರಲು ಪ್ರಯತ್ನಿಸಿದರು. ಏತನ್ಮಧ್ಯೆ, ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಎಳೆದುತಂದ ಶಬರಿಮಲೆ ಹೇಳಿಕೆ ಬಹುಸಂಖ್ಯಾತ ಸಮುದಾಯಗಳಲ್ಲಿ ಆತಂಕವನ್ನುಂಟು ಮಾಡಿದೆ. ಸಿಪಿಎಂನ ಶಬರಿಮಲೆ ನೀತಿಯಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ಯೆಚೂರಿ ಹೇಳಿಕೆ ನೀಡಿದ್ದರು. ಸಚಿವ ಎಂ.ಎಂ.ಮಣಿ ಸೇರಿದಂತೆ ಅನೇಕರ ಸಹಮತದ ಪ್ರತಿಕ್ರಿಯೆಯಿಂದ ಇದು ಮತ್ತಷ್ಟು ದೃಢಪಟ್ಟಿತು.

                ಯೆಚೂರಿ ಅವರ ಹೇಳಿಕೆಯು ಭಕ್ತರ ಮೇಲೆ ಆತಂಕವನ್ನುಂಟು ಮಾಡಿದೆ ಎಂಬ ಎಚ್ಚರಿಕೆಗಳ ಹೊರತಾಗಿಯೂ, ಮುಖ್ಯಮಂತ್ರಿ ಪಿಣರಾಯಿ ಅಥವಾ ಪಕ್ಷದ ಕಾರ್ಯದರ್ಶಿ ಎ ವಿಜಯರಾಘವನ್ ಅಥವಾ ಪಿಬಿ ಸದಸ್ಯರಾದ ಎಂ.ಎ. ಬೇಬಿ, ಕೊಡಿಯೇರಿ ಈ ಮೊದಲಾದವರು ಪರಿಸ್ಥಿತಿಯನ್ನು ಸರಿಪಡಿಸಲು ಪ್ರಯತ್ನಿಸಲಿಲ್ಲ.

                ಈ ಕಾರಣದಿಂದಾಗಿ, ಪಿಣರಾಯಿ ಸರ್ಕಾರವು ಆಡಳಿತವನ್ನು ಮುಂದುವರಿಸಿದರೆ, ಶಬರಿಮಲೆಯಲ್ಲಿ ಮಹಿಳಾ ಪ್ರವೇಶದ ವಿಷಯದಲ್ಲಿ ಸರ್ಕಾರ ಹಿಂದಿನ ನಿಲುವನ್ನು ತೆಗೆದುಕೊಳ್ಳುತ್ತದೆ ಎಂಬ ನಂಬಿಕೆಗಳೊಂದಿಗೆ  ಪ್ರಚಾರ ಕಾವೇರಿತು.  ಇದರೊಂದಿಗೆ ಮುಂದೆ ಎದುರಾಗುವ ಸವಾಲನ್ನು ನಿಯಂತ್ರಿಸಲು ಸಾಮೂಹಿಕ ನಡೆ ಅಗತ್ಯ ಎಂಬ ಕಲ್ಪನೆ ಬಂದಿತು. ಇದು ಪ್ರಮುಖ ಆಂತರಿಕ ಕ್ರಾಂತಿಗೆ ಕಾರಣವಾಯಿತು.

              ಬಿಜೆಪಿಯ ದುರ್ಬಲ ಅಭ್ಯರ್ಥಿಗಳು ಸ್ಪರ್ಧಿಸಿದ ಕ್ಷೇತ್ರಗಳಲ್ಲಿನ ಲೋಕಸಭಾ ಚುನಾವಣೆಯಂತೆ ಈ ಬಾರಿ ಬಿಜೆಪಿಯ ಪೆಟ್ಟಿಗೆಯಲ್ಲಿ ಬೀಳಬೇಕಿದ್ದ ನಿಷ್ಠಾವಂತರ ಮತಗಳ ಉತ್ತಮ ಭಾಗವು ಯುಡಿಎಫ್ ಪೆಟ್ಟಿಗೆಯಲ್ಲಿ ಬಿದ್ದಿದೆ ಎಂದು ತೀರ್ಮಾನಿಸಲಾಗಿದೆ. ಗುಪ್ತಚರ ವರದಿಯ ಪ್ರಕಾರ, ಒಂದು ಕ್ಷೇತ್ರದಲ್ಲಿ ಈ ಸಂಖ್ಯೆ ಸುಮಾರು 6,000 ರಷ್ಟಿದೆ.

           ಈ ಮತಗಳು ಬಿಜೆಪಿ ಗೆಲ್ಲುವ ಸಾಧ್ಯತೆ ಇರುವ ಎ-ಪ್ಲಸ್ ಮತ್ತು ಎ-ಗ್ರೇಡ್ ಕ್ಷೇತ್ರಗಳಲ್ಲಿನ ಬಿಜೆಪಿ ಅಭ್ಯರ್ಥಿಗಳಲ್ಲಿ ಕೇಂದ್ರೀಕೃತವಾಗಿದೆ. ಇದು ಎಡಪಂಥೀಯರಿಗೆ ಅಪಾಯಕಾರಿಯಾಗಿದೆ. ಮತ್ತೊಮ್ಮೆ,  ಆಡಳಿತ ಮುಂದುವರಿಕೆಯ ಎಡಪಂಥೀಯರ ಕನಸಿಗೆ ತಣ್ಣೀರೆರಚಿದೆ. 

                  ಎಡ ಮತ್ತು ಯುಡಿಎಫ್ ಗಮನಾರ್ಹ ಮತ ವ್ಯತ್ಯಾಸಗಳನ್ನು ಹೊಂದಿರದ ಕ್ಷೇತ್ರಗಳಲ್ಲಿ ಇಂತಹ ಅಂಕಿ ಅಂಶಗಳು ಸರ್ಕಾರಕ್ಕೆ ಕಳವಳಕಾರಿ. ಇದು ಎಡಪಂಥೀಯರು ನಿರೀಕ್ಷಿಸುವ 20 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಫಲಿತಾಂಶವನ್ನು ಬುಡಮೇಲುಗೊಳಿಸಲಿದೆ.  ಈ ಸಂದರ್ಭದಲ್ಲಿ, 78 ರಿಂದ 87  ಕಡಿಮೆಯಿಲ್ಲದ ವಿಜಯದ ಯುಡಿಎಫ್ ಲೆಕ್ಕಾಚಾರ ಸರಿಯಾಗಿದೆ.

                   ಪ್ರಚಾರ ತಂತ್ರಗಳಿಗೆ ಆದ್ಯತೆ ನೀಡಲು ಎಡ ನಾಯಕತ್ವ ವಿಫಲವಾಗಿದೆ ಎಂದು ನಾಯಕರು ಟೀಕಿಸಿದ್ದಾರೆ. ಎಲ್ಲಾ ನಿರೀಕ್ಷೆಗಳನ್ನು ಕಿಟ್‍ಗಳು ಮತ್ತು ಪಿಂಚಣಿಗಳ ಮೇಲೆ ಇರಿಸಲಾಗಿದೆ ಎಂದು ನಾಯಕತ್ವದ ಮೇಲೆ ಟೀಕೆಗಳು ವ್ಯಕ್ತವಾಗಿವೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries