ಬೆಂಗಳೂರು ; ಕರ್ನಾಟಕದಲ್ಲಿ ಸಾರಿಗೆ ನೌಕರರ ಮುಷ್ಕರದಿಂದಾಗಿ ಬಸ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ದಕ್ಷಿಣ ರೈಲ್ವೆ ಜನರ ಅನುಕೂಲಕ್ಕಾಗಿ ರೈಲುಗಳ ಸಂಚಾರವನ್ನು ಆರಂಭಿಸಿದೆ.
ಯಶವಂತಪುರ- ಮಂಗಳೂರು ಜಂಕ್ಷನ್ ಹಾಗೂ ಕಾರವಾರ ಮಾರ್ಗದಲ್ಲಿ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರ ನಡೆಸಲಿದೆ. ಸಾಮಾನ್ಯ ದರದಲ್ಲಿ ಈ ರೈಲುಗಳಲ್ಲಿ ಜನರು ಸಂಚಾರ ನಡೆಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಸಾರಿಗೆ ನೌಕರರ ಮುಷ್ಕರದಿಂದಾಗಿ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಈ ಸಂದರ್ಭದಲ್ಲಿ ಈ ರೈಲುಗಳಿಂದ ಬೆಂಗಳೂರು-ಕರಾವಳಿ ನಡುವೆ ಸಂಚಾರ ನಡೆಸುವ ಜನರಿಗೆ ಅನುಕೂಲವಾಗಲಿದೆ.
ರೈಲುಗಳ ವೇಳಾಪಟ್ಟಿ
* 06557 ನಂಬರ್ ರೈಲು ಏಪ್ರಿಲ್ 13ರಿಂದ ಮಂಗಳವಾರ, ಗುರುವಾರ, ಭಾನುವಾರ ಸಂಚಾರ ನಡೆಸಲಿದೆ. ಯಶವಂತಪುರದಿಂದ ಬೆಳಗ್ಗೆ 7ಕ್ಕೆ ಹೊರಡುವ ರೈಲು ಮಂಗಳೂರು ಜಂಕ್ಷನ್‌ನನ್ನು ಸಂಜೆ 5 ಗಂಟೆಗೆ ತಲುಪಲಿದೆ.
* 06578 ನಂಬರ್ ರೈಲು ಮಂಗಳೂರು ಜಂಕ್ಷನ್‌ನಿಂದ ಬೆಳಗ್ಗೆ 11.30ಕ್ಕೆ ಹೊರಡಲಿದೆ. ರಾತ್ರಿ 8.20ಕ್ಕೆ ಯಶವಂತಪುರ ತಲುಪಲಿದೆ. ಏಪ್ರಿಲ್ 12ರಿಂದ ಬುಧವಾರ, ಶುಕ್ರವಾರ ಮತ್ತು ಸೋಮವಾರ ರೈಲು ಸಂಚಾರ ನಡೆಸಲಿದೆ.
* 06539 ನಂಬರ್ ರೈಲು ಯಶವಂತಪುರದಿಂದ ಬೆಳಗ್ಗೆ 7ಕ್ಕೆ ಹೊರಟು, ಸಂಜೆ 5ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. ಏಪ್ರಿಲ್ 17ರಿಂದ ಶನಿವಾರ ಈ ರೈಲು ಸಂಚಾರ ನಡೆಸಲಿದೆ.
* 06540 ನಂಬರ್ ರೈಲು ಮಂಗಳೂರು ಜಂಕ್ಷನ್‌ನಿಂದ ಬೆಳಗ್ಗೆ 9.15ಕ್ಕೆ ಹೊರಡಲಿದ್ದು, ರಾತ್ರಿ 8.05ಕ್ಕೆ ಯಶವಂತಪುರಕ್ಕೆ ಆಗಮಿಸಲಿದೆ. ಏಪ್ರಿಲ್ 18ರಿಂದ ಭಾನುವಾರ ಈ ರೈಲು ಓಡಲಿದೆ.
* 06211 ರೈಲು ಯಶವಂತಪುರದಿಂದ ಬೆಳಗ್ಗೆ 7ಕ್ಕೆ ಹೊರಡಲಿದ್ದು ಕಾರವಾರಕ್ಕೆ ರಾತ್ರಿ 8.55ಕ್ಕೆ ತಲುಪಲಿದೆ. ಏಪ್ರಿಲ್ 12ರಿಂದ ಸೋಮವಾರ, ಬುಧವಾರ ಮತ್ತು ಶುಕ್ರವಾರ ಈ ರೈಲು ಸಂಚಾರ ನಡೆಸಲಿದೆ.
* 06212 ರೈಲು ಕಾರವಾರದಿಂದ ಬೆಳಗ್ಗೆ 5.30ಕ್ಕೆ ಹೊರಡಲಿದ್ದು, ರಾತ್ರಿ 8.20ಕ್ಕೆ ಯಶವಂತಪುರ ತಲುಪಲಿದೆ. ಮಂಗಳವಾರ, ಗುರುವಾರ ಮತ್ತು ಶನಿವಾರ ಈ ರೈಲು ಏಪ್ರಿಲ್ 13ರಿಂದ ಸಂಚಾರ ನಡೆಸಲಿದೆ.