ತಿರುವನಂತಪುರ: ಕೊರೋನಾ ಉಲ್ಬಣವನ್ನು ಗಮನದಲ್ಲಿಟ್ಟು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿಶೇಷ ಸಭೆ ಕರೆದಿದ್ದಾರೆ. ಸಭೆ ಇಂದು ಬೆಳಿಗ್ಗೆ 11 ಕ್ಕೆ ನಿಗದಿಯಾಗಿದೆ. ರಾಜ್ಯದ ಕೊರೋನಾ ಪರಿಸ್ಥಿತಿಯನ್ನು ನಿರ್ಣಯಿಸಲು ತುರ್ತು ವಿಶೇಷ ಸಭೆ ಕರೆಯಲಾಗುತ್ತಿದೆ.
ಸಭೆಯಲ್ಲಿ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳು ಭಾಗವಹಿಸಲಿದ್ದಾರೆ. ರಾಜ್ಯದಲ್ಲಿ ಸಕಾರಾತ್ಮಕತೆ ಪ್ರಮಾಣ ದೇಶದಲ್ಲಿ ಅತಿ ಹೆಚ್ಚು. ಈ ಹಿನ್ನೆಲೆಯಲ್ಲಿಯೇ ಸಭೆ ಕರೆಯಲಾಗಿದೆ. ಮಂಗಳವಾರ, ರಾಜ್ಯದಲ್ಲಿ 19,577 ಹೊಸ ಕರೋನಾ ಸೋಂಕಿತರಿರುವುದು ದೃಢಪಟ್ಟಿದೆ.
ರಾಜ್ಯದಲ್ಲಿ ಕೊರೋನಾ ಹರಡುವಿಕೆಯ ಎರಡನೇ ಹಂತವು ತುಂಬಾ ತೀವ್ರವಾಗಿದೆ. ಹೆಚ್ಚಿನ ಜಿಲ್ಲೆಗಳಲ್ಲಿ, ದೈನಂದಿನ ಪ್ರಕರಣಗಳ ಸಂಖ್ಯೆ ಸಾವಿರಕ್ಕೂ ಹೆಚ್ಚಿರುವುದು ದೃತಿಗೆಡಿಸುತ್ತಿದೆ . ಸಂಪರ್ಕದ ಮೂಲಕ ರೋಗಕ್ಕೆ ತುತ್ತಾದವರ ಸಂಖ್ಯೆ ಹೆಚ್ಚಿರುವುದೂ ಕಳವಳ ಮೂಡಿಸಿದೆ.
ಸೋಂಕು ಹರಡುವುದನ್ನು ಕಡಿಮೆ ಮಾಡಲು ರಾಜ್ಯವು ನಿಯಂತ್ರಣಗಳನ್ನು ಬಿಗಿಗೊಳಿಸಿದೆ. ಕೇರಳವು ಗಡಿಯಲ್ಲಿ ತಪಾಸಣೆ ಪ್ರಾರಂಭಿಸಿದೆ. ರಾತ್ರಿ ಕಫ್ರ್ಯೂ ಸೇರಿದಂತೆ ನಿರ್ಬಂಧಗಳನ್ನು ವಿಧಿಸಲಾಗಿದೆ.