ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್-19 ಟೆಸ್ಟ್ ಪಾಸಿಟಿವಿಟಿ ಹೆಚ್ಚಳಗೊಂಡಿದೆ.
ಬುಧವಾರ(ಏ.28)ದ ಟೆಸ್ಟ್ ಪಾಸಿಟಿವಿಟಿ 24 ಆಗಿದೆ. ಮಂಗಳವಾರ 25.5 ಆಗಿತ್ತು. ಮಂಗಳವಾರ 3546 ಮಂದಿಯನ್ನು ತಪಾಸಣೆಗೊಳಪಡಿಸಲಾಗಿದ್ದು, ಇವರಲ್ಲಿ 906 ಮಂದಿಗೆ ಕೋವಿಡ್ ಪಾಸಿಟಿವ್ ಖಚಿತಗೊಂಡಿತ್ತು.
ಮಂಗಳವಾರ 4 ಗ್ರಾಮ ಪಂಚಾಯತ್ ಗಳ ಟೆಸ್ಟ್ ಪಾಸಿಟಿವಿಟಿ 50ಕ್ಕಿಂತ ಅಧಿಕವಾಗಿದೆ. ಅಂದರೆ ತಪಾಸನೆಗೊಳಪಟ್ಟವರಲ್ಲಿ ಅಧಾರ್ಂಶಕ್ಕಿಂತ ಅಧಿಕ ಮಂದಿಗೆ ಕೋವಿಡ್ ಪಾಸಿಟಿವ್ ಖಚಿತಗೊಂಡಿದೆ. ಮೀಂಜ ಗ್ರಾಮ ಪಂಚಾಯತ್ 66.7, ವೆಸ್ಟ್ ಏಳೇರಿ ಗ್ರಾಮ ಪಂಚಾಯತ್ 64.4, ಪೈವಳಿಕೆ ಗ್ರಾಮ ಪಂಚಾಯತ್ 55.6, ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯತ್ 51.7 ಎಂಬ ಗಣನೆಯಾಗಿದೆ.
ಮಂಗಳವಾರ ಒಟ್ಟು 41 ಸ್ಥಲೀಯಾಡಳಿತ ಸಂಸ್ಥೆಗಲಲ್ಲಿ 29 ಕಡೆಗಳಲ್ಲಿ ಟೆಸ್ಟ್ ಪಾಸಿಟಿವಿಟಿ 20ಕ್ಕಿಂತ ಅಧಿಕವಾಗಿತ್ತು. ಪಿಲಿಕೋಡ್ 48.3, ಮಡಿಕೈ 43.8, ಈಸ್ಟ್ ಏಲೆರಿ 43.6, ಕಿನಾನೂರು-ಕರಿಂದಳಂ 38.9, ದೇಲಂಪಾಡಿ 37.9, ಪಳ್ಳಿಕ್ಕರೆ 37.6, ಮಂಜೇಶ್ವರ 35.3, ಕಯ್ಯೂರು-ಚೀಮೇನಿ 35.1, ನೀಲೇಶ್ವರ 33.5, ಮಂಗಲ್ಪಾಡಿ 33.3, ಕಾಞಂಗಾಡು 30.8, ಕೋಡೋಂ-ಬೇಳೂರು 28.1, ಅಜಾನೂರು 28, ಬೆಳ್ಲೂರು 25, ಚೆಂಗಳ 24.4, ಬೇಡಡ್ಕ 24.3, ಪಡನ್ನ 23.9, ಚೆಮ್ನಾಡ್ 23.7, ಕುಂಬಳೆ 23.7, ಪುಲ್ಲೂರು-ಪೆರಿಯ 23.1, ಕುತ್ತಿಕೋಲು 22.6, ಚೆರುವತ್ತೂರು 22.6, ಪುತ್ತಿಗೆ 22.2, ಬಳಾಲ್ 21.6, ಕಳ್ಳಾರ್ 20.5 ಎಂಬ ಗಣನೆಯಿದೆ.
ಕಳೆದ ಸೋಮವಾರ (ಏ.26) ಕಾಸರಗೋಡು ಜಿಲ್ಲೆಯ ಟೆಸ್ಟ್ ಪಾಸಿಟಿವಿಟಿ ಗಣನೆ 31.9 ಆಗಿತ್ತು. 3402 ಮಂದಿಯನ್ನು ತಪಾಸಣೆಗೊಳಪಡಿಸಲಾಗಿತ್ತು. ಇವರಲ್ಲಿ 1086 ಮಂದಿಗೆ ಕೋವಿಡ್ ಪಾಸಿಟಿವ್ ಖಚಿತಗೊಂಡಿತ್ತು.