ತಲಶೇರಿ: ಚಿಕಿತ್ಸೆಯಲ್ಲಿದ್ದು ಕೊರೋನಾದಿಂದ ಮುಕ್ತವಾಗಿದ್ದ ಮಹಿಳಾ ವೈದ್ಯೆ ಹಠಾತ್ ಕೊನೆಯುಸಿರೆಳೆದ ಘಟನೆ ನಡೆದಿದೆ. ಪಾಲಿಸೇರಿ ಪೋಲೀಸ್ ಕ್ವಾರ್ಟರ್ಸ್ ಬಳಿಯ ನಬಾಮ್ ಮನೆಯ ಡಾ.ಶವಾಫರ್ ಎಂಬವರ ಪತ್ನಿ ಡಾ. ಸಿ.ಸಿ. ಮಹಾ (25) ಮೃತಪಟ್ಟ ದುರ್ದೈವಿ ವೈದ್ಯೆ. ಮಂಗಳವಾರ ಬೆಳಿಗ್ಗೆ ಮಂಗಳೂರಿನ ಇಂಡಿಯಾನಾ ಆಸ್ಪತ್ರೆಯಲ್ಲಿ ನಿಧನರಾದರು.
ಮೃತ ವೈದ್ಯೆ ಏಳು ತಿಂಗಳ ಗರ್ಭಿಣಿಯಾಗಿದ್ದು, ಹುಟ್ಟಲಿರುವ ಮಗುವನ್ನು ಉಳಿಸಲು ವೈದ್ಯರು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಅವರು ಪಾಲಿಸೇರಿಯ ಸಿ.ಸಿ. ಅಬ್ದುಲ್ ಬಶೀರ್ ಮತ್ತು ನಾಸ್ತಿಯಾ ಬಶೀರ್ ಅವರ ಪುತ್ರಿ. ಮಂಗಳೂರಿನ ಕನಚೂರ್ ಆಸ್ಪತ್ರೆಯಲ್ಲಿ ವ್ಯಾಸಂಗಮಾಡಿ ಇಂಡಿಯಾನಾ ಆಸ್ಪತ್ರೆಯಲ್ಲಿ ವೈದ್ಯೆಯಾಗಿದ್ದರು. ವೈದ್ಯೆಯ ಉದರದಲ್ಲಿದ್ದ ಏಳು ತಿಂಗಳ ಮಗುವನ್ನು ಉಳಿಸಲು ಶತಾಯಗತಾಯ ಪ್ರಯತ್ನಿಸಿ ಕೈಸೋತ ತಜ್ಞ ವೈದ್ಯರ ತಂಡ ಬಳಿಕ ಕಣ್ಣೀರ ಕಡಲಲ್ಲಿ ಮರುಗಿದ್ದು ತೀವ್ರ ಸಂತಾಪಕ್ಕೂ ಕಾರಣವಾಯಿತು.