ತಿರುವನಂತಪುರಂ: ತ್ರಿಶೂರ್ ಪೂರಂ ಗೆ ಸಾರ್ವಜನಿಕ ಪ್ರವೇಶವನ್ನು ನಿಬರ್ಂಧಿಸಲು ತೀರ್ಮಾನಿಸಲಾಗಿದೆ. ಪೂರಂ ಸಾಂಕೇತಿಕ ಸಮಾರಂಭವಾಗಿ ಮಾತ್ರ ನಡೆಯಲಿದೆ.
ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಇಂದು ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಾರ್ವಜನಿಕರಿಗೆ ಭಾಗವಹಿಸಲು ಅವಕಾಶ ನೀಡಬೇಕೆಂಬ ದೇವಸ್ವಂ ಮಂಡಳಿಯ ಬೇಡಿಕೆಯನ್ನು ತಿರಸ್ಕರಿಸುವ ಮೂಲಕ ಇಂತಹ ನಿರ್ಧಾರ ತೆಗೆದುಕೊಳ್ಳಲಾಗಿದೆ.