ಕಾಸರಗೋಡು: ಕಾಞಂಗಾಡ್ ಸೌರ ಉದ್ಯಾನದಲ್ಲಿ ಬೆಂಕಿ ಅವಘಡ ಉಂಟಾಗಿದೆ. ನಿನ್ನೆ ಮಧ್ಯಾಹ್ನ ಅಗ್ನಿ ಅವಘಡ ಸಂಭವಿಸಿದ್ದು ಜನರಿಲ್ಲದ್ದರಿಂದ ಜೀವಹಾನಿ ಉಂಟಾಗಿಲ್ಲ.
ಭಾನುವಾರ ಮಧ್ಯಾಹ್ನ 2.30 ರ ಸುಮಾರಿಗೆ ವೆಲ್ಲುಡಾ ಸ್ಥಾವರದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಲ್ಯೂಮಿನಿಯಂ ವಿದ್ಯುತ್ ಕೇಬಲ್‍ಗಳನ್ನು ಮಧ್ಯಾಹ್ನ ಇಲ್ಲಿಗೆ ತರಲಾಗಿತ್ತು. ಶಾರ್ಟ್ ಸಕ್ರ್ಯೂಟ್‍ನಿಂದ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಅಗ್ನಿಶಾಮಕ ದಳದ ಮೂರು ಘಟಕಗಳು ಆಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದವು. ಬೆಂಕಿಯನ್ನು ರಾತ್ರಿವರೆಗೂ ನಿಯಂತ್ರಣಕ್ಕೆ ತರಲಾಗಿಲ್ಲ.ಸೋಲಾರ್ ಪಾರ್ಕ್‍ಗೆ ಅರ್ಧ ಕೋಟಿ ರೂ.ಗಳ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.