ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ 5 ವಿಧಾನಸಭೆ ಕ್ಷೇತ್ರಗಳ ಚುನಾವಣೆ ನಡೆಯಲಿದ್ದು, ಸಿದ್ಧತೆ ಪೂರ್ಣಗೊಂಡಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತರ್ ಬಾಬು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪಿ.ಬಿ.ರಾಜೀವ್ ಜತೆಗಿದ್ದರು.
ಮಂಜೇಶ್ವರ, ಕಾಸರಗೋಡು, ಉದುಮಾ, ಕಾಞಂಗಾಡ್, ತ್ರಿಕರಿಪುರ ವಿಧಾನಸಭೆ ಕ್ಷೇತ್ರಗಳ 1591 ಮತಗಟ್ಟೆಗಳಲ್ಲಿ ಮತದಾನಕ್ಕೆ ಸಜ್ಜೀಕರಣ ನಡೆದಿದೆ. ಇವುಗಳಲ್ಲಿ 983 ಪ್ರಧಾನ ಮತಗಟ್ಟೆಗಳು, 608 ತಾತ್ಕಾಲಿಕ ಮತಗಟ್ಟೆಗಳು ಇವೆ.
ವಿಧಾನಸಭೆ ಚುನಾವಣೆ ಅಂಗವಾಗಿ ಮತದಾತರ ಪಟ್ಟಿಯಲ್ಲಿ 2021 ಜ.20ರ ನಂತರ ನೂತನವಾಗಿ ಸೇರ್ಪಡೆಗೊಂಡಿರುವವರೂ ಸೇರಿ ಜಿಲ್ಲೆಯಲ್ಲಿ ಒಟ್ಟು 10,59,967 ಮಂದಿ ಮತದಾತರಿದ್ದಾರೆ. ಇವರಲ್ಲಿ ಆನಿವಾಸಿ ಮತದಾತರೂ ಸೇರಿ ಒಟ್ಟು 1058337 ಮಂದಿ ಸಾಮಾನ್ಯ ಮತದಾತರು, 1630 ಸೇವಾ ಮತದಾತರು ಇದ್ದಾರೆ. ಒಟ್ಟು ಮತದಾತರಲ್ಲಿ 518501 ಮಂದಿ ಪುರುಷರು, 541460 ಮಂದಿ ಮಹಿಳೆಯರು, 6 ಮಂದಿ ತೃತೀಯ ಲಿಂಗಿಗಳು ಇದ್ದಾರೆ.
153 ಮಂದಿ ಮೈಕ್ರೋ ಒಬ್ಸರ್ ವರ್ ಗಳು, ತಲಾ 1989 ಮಂದಿ ಪ್ರಿಸೈಡಿಂಗ್ ಅಧಿಕಾರಿಗಳು, ಫಸ್ಟ್ ಪೆÇೀಲಿಂಗ್ ಅಧಿಕಾರಿಗಳು, ದ್ವಿತೀಯ ಪೆÇೀಲಿಂಗ್ ಅಧಿಕಾರಿಗಳು, ತೃತೀಯ ಪೆÇೀಲಿಂಗ್ ಅಧಿಕಾರಿಗಳು ಸಹಿತ 9700 ಮಂದಿ ಸಿಬ್ಬಂದಿ ಕಾಸರಗೋಡು ಜಿಲ್ಲೆಯಲ್ಲಿ ಇ- ಪೆÇೀಸ್ಟಿಂಗ್ ಮೂಲಕ ಚುನಾವಣೆ ಕರ್ತವ್ಯದಲ್ಲಿದ್ದಾರೆ. ಶೇ 40 ರಿಸರ್ವ್ ಸಿಬ್ಬಂದಿಯೂ ಇದ್ದಾರೆ. ಇದಲ್ಲದೆ ಕೋವಿಡ್ 19 ಸಂಹಿತೆ ಖಚಿತಪಡಿಸುವ ನಿಟ್ಟಿನಲ್ಲಿ ಎಲ್ಲ ಮತಗಟ್ಟೆಗಳಲ್ಲೂ ತಲಾ ಒಬ್ಬರು ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು ನೇಮಕಗೊಂಡಿದ್ದಾರೆ.
ಒಂದಕ್ಕಿಂತ ಅಧಿಕ ಮತದಾನ ತಡೆಗೆ ಕಠಿಣ ಕ್ರಮ
ವಿಧಾನಸಭೆ ಚುನಾವಣೆ ಸಂಬಂಧ ಕಾಸರಗೋಡು ಜಿಲ್ಲೆಯಲ್ಲಿ ಒಬ್ಬರು ಒಂದಕ್ಕಿಂತ ಅಧಿಕ ಮತದಾನ ನಡೆಸುವ ಕ್ರಮವನ್ನು ಕಡ್ಡಾಯವಾಗಿ ತಡೆಯುವ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಮುನ್ಸೂಚನೆ ಎಲ್ಲ ಮತಗಟ್ಟೆಗಳ ಮುಂದೆ ಪ್ರದರ್ಶಿಸಲಾಗುವುದು. ಜಿಲ್ಲೆಯ 5 ವಿಧಾನಸಭೆ ಕ್ಷೇತ್ರಗಳ ಮತದಾತರ ಪಟ್ಟಿ ಪರಿಶೀಲಿಸಿ ಸ್ಥಳದಲ್ಲಿ ಇಲ್ಲದೇ ಇರುವ, ನಿಧನರಾದವರ , ವರ್ಗಾವಣೆಗೊಂಡು ತೆರಳಿರುವ ಮಂದಿಯ ಎ.ಎಸ್.ಡಿ.(ಆಬ್ಸೆಂಟ್, ಶಿಫ್ಟೆಡ್, ಡೆತ್) ಪಟ್ಟಿ ಸಿದ್ಧಪಡಿಸಿ ರಿಟನಿರ್ಂಗ್ ಅಧಿಕಾರಿ ಮುಖಾಂತರ ಮುಂದಿನ ಕ್ರಮಗಳಿಗಾಗಿ ಪ್ರಿಸೈಡಿಂಗ್ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಎ.ಎಸ್.ಡಿ. ಪಟ್ಟಿಯಲ್ಲಿ ಸೇರಿರುವ ಮತದಾತರು ಮತಚಲಾಯಿಸುವ ನಿಟ್ಟಿನಲ್ಲಿ ಅವರ ಫೆÇಟೋ ಚಿತ್ರಿಸಿ ಡಿಜಿಟೈಸ್ ನಡೆಸಿ ಇರಿಸಲಾಗುವುದು. ಎ.ಎಸ್.ಡಿ. ಪಟ್ಟಿಯಲ್ಲಿ ಸೇರಿರುವ ಮತದಾತರು 1951 ರ ಪ್ರಜಾಪ್ರಭುತ್ವ ನಿಯಮ 31 ಪ್ರಕಾರ ಸತ್ಯ ಪ್ರತಿಜ್ಞೆ ಸಲ್ಲಿಸಬೇಕು.
ಸೋಮವಾರ ಪೆÇೀಲಿಂಗ್ ಸಾಮಾಗ್ರಿಗಳ ವಿತರಣೆ :
ಕಾಸರಗೋಡು ಜಿಲ್ಲೆಯ 5 ಕೇಂಸದ್ರಗಳಲ್ಲಿ ಪೆÇೀಲಿಂಗ್ ಸಾಮಾಗ್ರಿಗಳ ವಿತರಣೆ ಏ.5ರಂದು ಬೆಳಗ್ಗೆ 8 ರಿಂದ ಆರಮಭಗೊಳ್ಳಲಿದೆ. ಕೋವಿಡ್ ಹಿನ್ನೆಲೆಯಲ್ಲಿ ಜನಗುಂಪು ಸೇರದಂತೆ ಬೆಳಗ್ಗೆ 8 ರಿಂದ 9.30 ವರೆಗೆ, 9.30ರಿಂದ 11 ಗಂಟೆ ವರೆಗೆ, 11 ಗಂಟೆಗೆಯಿಂದ 12.30 ವರೆಗೆ ಮೂರು ಹಂತದಲ್ಲಿ ಈ ವಿತರಣೆ ಜರುಗಲಿದೆ.
ಪ್ರಿಸೈಡಿಂಗ್ ಅಧಿಕಾರಿ, ಫಸ್ಟ್ ಪ್ರಿಸೈಡಿಂಗ್ ಅಧಿಕಾರಿ ಮಾತ್ರ ಈ ಕೌಂಟರ್ ಗಳಿಗೆ ಪ್ರವೇಶಿಸಲು ಅನುಮತಿಯಿರುವುದು. ಇತರ ಪೆÇೀಲಿಂಗ್ ಸಿಬ್ಬಂದಿ ಅನುಮತಿ ಹೊಂದಿರುವ ವಾಹನಗಳಲ್ಲೇ ಕುಳಿತುಕೊಳ್ಳಬೇಕು. ಕೌಂಟರ್ ಡ್ಯೂಟಿಯ ಸಿಬ್ಬಂದಿ , ರೂಟ್ ಅಧಿಕಾರಿಗಳು, ಸೆಕ್ಟರಲ್ ಅಧಿಕಾರಿಗಳು ಇವರಿಗೆ ವಿತರಣೆ ಕೇಂದ್ರಗಳಿಗೆ ಪ್ರವೇಶಾತಿ ಇರುವುದು. ಆಯಾ ರೂಟ್ ಅಧಿಕಾರಿಗಳು, ಕೌಂಟರ್ ಅಸಿಸಸ್ಟೆಂಟ್ ಗಳು ಪೆÇೀಲಿಂಗ್ ಸಾಮಾಗ್ರಿಗಳ ಸಹಿತದ ಬ್ಯಾಗ್ ಗಳನ್ನು ವಾಹನಗಳಿಗೆ ತಲಪಿಸಬೇಕಾದವರು. ವಿದ್ಯುನ್ಮಾನ ಮತಯಂತ್ರ, ಪೇಪರ್ ಸೀಲ್, ಇತರ ಸೀಲುಗಳು, ಇತರ ಸಾಮಾಗ್ರಿಗಳು ಇತ್ಯಾದಿ ಪ್ರಿಸೈಡಿಂಗ್ ಅಧಿಕಾರಿ/ ಫಸ್ಟ್ ಪೆÇೀಳಿಂಗ್ ಅಧಿಕಾರಿಗಳು ನಿಗದಿ ಪಡಿಸಿರುವ ಕೌಂಟರ್ ಗಳಿಂದ ಸ್ವೀಕರಿಸಬೇಕು. ರಿಸರ್ವ್ ಆಗಿರುವ ಸಿಬ್ಬಂದಿಗೆ ವಿತರಣೆ ಕೇಂದ್ರಗಳಿಗೆ ಪ್ರವೇಶಾತಿ ಇರುವುದು. ಇವರಿಗೆ ಪ್ರತ್ಯೇಕವಾಗಿ ಕುಳಿತುಕೊಳ್ಳುವ ಸೌಲಭ್ಯ ಸಜ್ಜುಗೊಳಿಸಲಾಗುವುದು.
ಕಾಸರಗೋಡು ಜಿಲ್ಲೆಯಲ್ಲಿ 64 ಸೂಕ್ಷ್ಮ ಮತಗಟ್ಟೆಗಳು, 45 ವಲನ್ನರಬಲ್ ಮತಗಟ್ಟೆಗಳು, 412 ಸೆನ್ಸೇಟಿವ್ ಮತಗಟ್ಟೆಗಳಿಗೆ. 738 ಮತಗಟ್ಟೆಗಲಲ್ಲಿ ಲೈವ್ ವೆಬ್ ಕಾಸ್ಟಿಂಗ್ ಸೌಲಭ್ಯ, 853 ಮತಗಟ್ಟೆಗಲಲ್ಲಿ ಸಇ.ಸಿ.ಟಿ.ವಿ. ಸೌಲಭ್ಯ ಸಜ್ಜುಗೊಳಿಸಲಾಗಿದೆ. ಕಾಸರಗೋಡು ಸಿವಬಿಲ್ ಸ್ಟೇಷನ್ ನಲ್ಲಿ ನಿಯಂತ್ರಣ ಕೊಠಡಿಯಲ್ಲಿ ಜಿಲ್ಲಾಧಿಕಾರಿ, ಪೆÇಲೀಸ್ ನಿರೀಕ್ಷಕರು, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಜಿಲ್ಲೆಯ ಮತಗಟ್ಟೆಗಳ ಆಗುಹೋಗುಗಳ ಬಗ್ಗೆ ಕಣ್ಗಾವಲು ನಡೆಸುವರು.
ವಿಶೇಷ ಪೆÇಲೀಸ್ ಪೆಟ್ರೋಲಿಂಗ್
ವಿಧಾನಸಭೆ ಚುನಾವಣೆ ಸಂಬಂಧ ಕಾಸರಗೋಡು ಜಿಲ್ಲೆಯಲ್ಲಿ 8 ಸಬ್ ಡಿವಿಝನ್ ಗಳನ್ನು ವಿಂಗಡಿಸಿ ಪ್ರತಿ ಉಪ ವಿಭಾಗಗಳ ಹೊಣೆ ತಲಾ ಒಬ್ಬ ಡಿ.ವೈ.ಎಸ್.ಪಿ. ಗಳಿಗೆ ನೀಡಲಾಗಿದೆ. 8 ರಿಂದ 10 ಮಂದಿ ಇರುವ ತಂಡ ಪ್ರತಿ ಮತಗಟ್ಟೆಗಳಲ್ಲಿ ಸಂರಕ್ಷಣೆ ನಡೆಸುವರು. ಈ ನಿಟ್ಟಿನಲ್ಲಿ 70 ತಂಡಗಳ ಪೆಟ್ರೋಲಿಂಗ್ ಇರುವುದು. ಇದಲ್ಲದೆ 45 ವಲ್ನರಬಲ್ ಮತಗಟ್ಟೆಗಳಲ್ಲಿ ಪ್ರತ್ಯೇಕ ಪೆಟ್ರೋಲಿಂಗ್ ತಂಡಗಳಿವೆ. 10 ತುಕಡಿ ಕೇಂದ್ರೀಯ ಸೇನೆ ಚುನಾವಣೆ ಅಂಗವಾಗಿ ಕಾಸರಗೋಡು ಜಿಲ್ಲೆಯಲ್ಲಿ ಕರ್ತವ್ಯದಲ್ಲಿದೆ.
ಕೊನೆಯ ಅಬ್ಬರದ ಪ್ರಚಾರವಿಲ್ಲ: ಬೈಕ್ ರಾಲಿಗೆ ಅನುಮತಿಯಿಲ್ಲ
ಮತದಾನ ಕೊನೆಗೊಳ್ಳುವ 48 ತಾಸುಗಳ ಮುಂಚಿತವಾದ ಅವಧಿಯಲ್ಲಿ ಜಾಹೀರಾತು ಪ್ರಚಾರಕ್ಕೆ ಅನುಮತಿಯಿದ್ದರೂ, ಈ ಬಾರಿಯ ಕೋವಿಡ್ ಸೋಮಕು ಹಾವಳಿಯ ಹಿನ್ನೆಲೆಯಲ್ಲಿ ಕೊನೆಯ ಸುತ್ತಿನ ಅಬ್ಬರದ ಪ್ರಚಾರ ನಿಷೇಧಿಸಲಾಗಿದೆ ಎಂದು ರಾಜ್ಯ ಚುನಾವಣೆ ಆಯೋಗ ಆದೇಶಿಸಿದೆ. ಮತದಾನ ನಡೆಯುವ 72 ತಾಸುಗಳ ಮುಂಚಿತವಾಗಿ ಮಾತ್ರ ಬೈಕ್ ರಾಲಿ ನಡೆಸಬಹುದು ಎಂದು ಆಯೋಗ ತಿಳಿಸಿದೆ. ಈ ಮೂಲಕ ಮತದಾನ ನಡೆಯುವ ಹಿಂದಿನ ದಿನ ಮತ್ತು ಮತದಾನದಂದು ಬೈಕ್ ರಾಲಿ ನಡೆಸಕೂಡದು.
ಅಕ್ರಮ ಮತದಾನ ನಡೆಸಿದರೆ ಒಂದು ವರ್ಷ ಸಜೆ
ಇನ್ನೊಬ್ಬರ ಮತದಾನ ತಾನು ನಡೆಸಲು ಯತ್ನಿಸಿದ ವ್ಯಕ್ತಿಗೆ ಪ್ರಜಾಪ್ರಭುತ್ವ ನೀತಿ ಭಾರತೀಯ ದಂಡ ಸಂಃಇತೆ 171 ಎಫ್ ಪ್ರಕಾರ ಒಂದು ವರ್ಷದ ಸಜೆ, ದಂಡ ವಿಧಿಸಲಾಗುವುದು. ಯಾರದ್ದೋ ಪ್ರೇರಣೆಯಿಂದ ಅಕ್ರಮ ಮತದಾನ ನಡೆಸಿದರೂ ಶಿಕ್ಷೆ ಖಚಿತವಾಗಿದೆ. ಇನ್ನೊಬ್ಬರ ಗುರುತು ಚೀಟಿ ಬಳಸಿ ಯಾ ದುರ್ಬಳಕೆ ನಡೆಸಿ ಅಕ್ರಮ ಮತದಾನ ನಡೆಸಲು ಯತ್ನಿಸಿದರೆ ಕೇಸು ದಾಖಲಿಸಲಾಗುವುದು.
ವಿದೇಶದಲ್ಲಿ, ರಾಜ್ಯದಿಂದ ಹೊರಗಿರುವ ಮಂದಿಯ ಗುರುತುಚೀಟಿ ಸಹಿತ ದಾಖಲೆಗಳನ್ನು ಯಾರು ಕೇಳಿದರೂ ನೀಡಬಾರದು. ಇದು ದುರ್ಬಳಕೆಯಾಗುವ ಸಾಧ್ಯತೆಗಳಿವೆ. ಇಂಥಾ ದಾಖಲೆ ಬಳಸಿ ಅಕ್ರಮ ಮತದಾನ ನಡೆಸಲು ಯಾರತಾದರೂ ಯತ್ನಿಸಿದರೆ, ಈ ದಾಖಲೆಗಳನ್ನು ಆರೋಪಿಗೆ ನೀಡಿದವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು.
ಆಮಿಷ, ಬೆದರಿಕೆಯ ಹಿನನೆಲೆಡಯಲ್ಲಿ ಅಕ್ರಮ ಮತದಾನಕ್ಕೆ ಮತದಾರರನ್ನು ಪ್ರೇರೇಪಿಸಕೂಡದು. ಮತಗಟ್ಟೆಗಳಲ್ಲಿ ಮತ್ತು ಅವುಗಳ ಬಳಿ ಸಂಘರ್ಷ ತಲೆದೋರುವಂತೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.