ಕೊಚ್ಚಿ: ರಾಜ್ಯದಲ್ಲಿ ಕೋವಿಡ್ ಹರಡುವುದರೊಂದಿಗೆ, ನಿರ್ಬಂಧಗಳನ್ನು ಕಠಿಣಗೊಳಿಸಲಾಗುತ್ತಿದೆ. ಇದರ ಭಾಗವಾಗಿ, ರಾಜ್ಯದ ಹೊರಗಿಂದ ರಾಜ್ಯಕ್ಕೆ ಆಗಮಿಸುವವರು ಕೋವಿಡ್ ಜಾಗೃತ ಪೆÇೀರ್ಟಲ್ ನಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ಆದೇಶ ನೀಡಲಾಗಿದೆ. ಕೇರಳ ಪೋಲೀಸರ ಅಧಿಕೃತ ಫೇಸ್‍ಬುಕ್ ಪುಟದ ಮೂಲಕ ಮಾಹಿತಿಯನ್ನು ಬಿಡುಗಡೆ ಮಾಡಲಾಗಿದೆ.
ಇತರ ದೇಶಗಳು ಮತ್ತು ಇತರ ರಾಜ್ಯಗಳಿಂದ ಕೇರಳಕ್ಕೆ ಬರುವ ಪ್ರಯಾಣಿಕರು ಕೋವಿಡ್ ಜಾಗ್ರತಾ ಪೆÇೀರ್ಟಲ್‍ನಲ್ಲಿ ನೋಂದಾಯಿಸಿಕೊಳ್ಳಬೇಕು. ಇದಕ್ಕಾಗಿ, ಕಂದಾಯ ಇಲಾಖೆಯ ಕೋವಿಡ್ ಜಾಗೃತಿ ಪೆÇೀರ್ಟಲ್,https://covid19jagratha.kerala.nic.in ಗೆ ಭೇಟಿ ನೀಡಬೇಕು.
ರೈಲು ಅಥವಾ ವಿಮಾನದ ಮೂಲಕ ಆಗಮಿಸುವವರು ವೆಬ್ ಪುಟದ ಕೆಳಭಾಗದಲ್ಲಿರುವ ಹೊಸ ನೋಂದಣಿ, ಕೋವಿಡ್ 19 ಜಾಗ್ರತಾ ಪೆÇೀರ್ಟಲ್ ಮತ್ತು ನೋಂದಣಿ ಕ್ಲಿಕ್ ಮಾಡುವ ಮೂಲಕ ತಮ್ಮ ಮೊಬೈಲ್ ಸಂಖ್ಯೆಯನ್ನು ನೀಡಿ ಪರಿಶೀಲಿಸಬೇಕು.
ನೋರ್ಕಾ ನೋಂದಣಿ ಐಡಿ ಇಲ್ಲದ ರಸ್ತೆ ಮಾರ್ಗ ಪ್ರಯಾಣಿಕರು ಕೂಡಾ ಹೊಸದಾಗಿ ನೋಂದಾಯಿಸಿಕೊಳ್ಳಬೇಕಾಗುತ್ತದೆ.
ಪರದೆಯ ಮೇಲೆ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿದ ನಂತರ, ಒಟಿಪಿ ಸಂಖ್ಯೆಯನ್ನು ಕೊಟ್ಟಿರುವ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ. ಈ ಒಟಿಪಿ ನಮೂದಿಸಿ ಮತ್ತು ಪರಿಶೀಲಿಸಿ.
ಪರಿಶೀಲನೆಯ ನಂತರ, ನಿಮ್ಮ ಹೆಸರು, ಹುಟ್ಟಿದ ದಿನಾಂಕ ಮತ್ತು ಗುರುತಿನ ಸಂಖ್ಯೆ ಸೇರಿದಂತೆ ಅಗತ್ಯ ಮಾಹಿತಿಯನ್ನು ನಮೂದಿಸಿ. ನಂತರ ಒದಗಿಸಿದ ಮಾಹಿತಿಯನ್ನು ಉಳಿಸಿದ ನಂತರ ನೋಂದಣಿ ಪೂರ್ಣಗೊಳ್ಳುತ್ತದೆ.
ನೋಂದಣಿ ಮಾಹಿತಿಯನ್ನು ನೋಂದಾಯಿತ ಮೊಬೈಲ್ ಸಂಖ್ಯೆಗೆ ಪಠ್ಯ ಸಂದೇಶವಾಗಿ ಕಳುಹಿಸಲಾಗುತ್ತದೆ. ಸಂದೇಶದಲ್ಲಿನ ಲಿಂಕ್ ನ್ನು ಕ್ಲಿಕ್ ಮಾಡುವುದರ ಮೂಲಕ ಪಾಸ್ ಗೆ ಇರುವ ಪಿಡಿಎಫ್ ಫಾರ್ಮ್ ಅನ್ನು ಡೌನ್ಲೋಡ್ ಮಾಡಬಹುದು.
ಈ ಪಾಸ್ ನ್ನು ಚೆಕ್ ಪೆÇೀಸ್ಟ್ನಲ್ಲಿ ತೋರಿಸುವ ಮೂಲಕ ಪ್ರಯಾಣಿಕರು ಕೇರಳಕ್ಕೆ ಪ್ರಯಾಣಿಸಬಹುದು.