HEALTH TIPS

ಮತದಾರರಲ್ಲಿ ಕಂಡುಬಂದ ಉತ್ಸಾಹ ಯುಡಿಎಫ್ ಅಧಿಕಾರಕ್ಕೆ ಬರಲಿದೆ ಎಂಬುದರ ಸೂಚನೆ; ಐತಿಹಾಸಿಕ ವಿಜಯದೊಂದಿಗೆ ಯುಡಿಎಫ್ ಅಧಿಕಾರಕ್ಕೆ ಬರಲಿದೆ: ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ

                          

            ತಿರುವನಂತಪುರ: ಯುಡಿಎಫ್ ಐತಿಹಾಸಿಕ ವಿಜಯದೊಂದಿಗೆ ಅಧಿಕಾರಕ್ಕೆ ಬರಲಿದೆ  ಎಂದು ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಹೇಳಿದ್ದಾರೆ. ಕೇರಳದಾದ್ಯಂತ ಮತದಾರರಲ್ಲಿ ಕಂಡುಬಂದ ಸಂಭ್ರಮ ಅದರ ಸಂಕೇತವಾಗಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

              ಐದು ವರ್ಷಗಳಿಂದ ಕೇರಳವನ್ನು ಅಧಃಪತನಕ್ಕೆ ತಳ್ಳಿದ ಎಡಪಂಥೀಯ ಸರ್ಕಾರದ ವಿರುದ್ಧ ಜನರು ಒಗ್ಗಟ್ಟಿನ ತೀರ್ಪು ನೀಡಿರುವುದು ಕಂಡುಬಂದಿದೆ. ಪ್ರತಿಪಕ್ಷಗಳು ಒಂದೊಂದಾಗಿ ಬಹಿರಂಗಪಡಿಸಿದ ಭ್ರಷ್ಟಾಚಾರವು ಎಡ ಸರ್ಕಾರದ ನಿಜ ಬಣ್ಣವನ್ನು ಬಹಿರಂಗಗೊಳಿಸಿತು ಎಂದವರು ತಿಳಿಸಿರುವರು.

              ಅಂತರರಾಷ್ಟ್ರೀಯ ಪಿ.ಆರ್ ಏಜೆನ್ಸಿಗಳ ಸಹಾಯದಿಂದ ನಡೆಸಿದ ಯಾವುದೇ ಸಮೀಕ್ಷೆಗಳು, ಪ್ರಚಾರಗಳು  ಎಡರಂಗವನ್ನು ಉಳಿಸಲಾರದು. ಶಬರಿಮಲೆಯ ಅನುಷ್ಠಾನ  ಮತ್ತು ನಂಬಿಕೆಗಳನ್ನು ಸರ್ಕಾರ ಮೆಟ್ಟಿನಿಂತು ದಾಷ್ಟ್ರ್ಯ ಮೆರೆದಿದ್ದು ಚುನಾವಣೆಯಲ್ಲಿ ಜನರನ್ನು ಆ ಹೆಸರಲ್ಲಿ ಮೋಸಗೊಳಿಸಲು ಪ್ರಯತ್ನಿಸಿದೆ. ಅದನ್ನೆಲ್ಲ ಭಕ್ತರು ಅರಿತುಕೊಂಡಿರುವರೆಂದು ಅವರು ತಿಳಿಸಿದರು. 

               ಸೋಲಿಗೆ ಹೆದರಿ ಎಡಪಂಥೀಯರು ಯುಡಿಎಫ್ ಕಾರ್ಯಕರ್ತರ ವಿರುದ್ಧ ರಾಜ್ಯದ ಅನೇಕ ಭಾಗಗಳಲ್ಲಿ ಹಿಂಸಾಚಾರ ನಡೆಸಿರುವರು.  ಹಲವಾರು ಯುಡಿಎಫ್ ಕಾರ್ಯಕರ್ತರು ಗಾಯಗೊಂಡಿದ್ದಾರೆ. ಎಡಪಂಥೀಯರು ಎಷ್ಟು ಪ್ರಚೋದಿಸಿದರೂ ತಮ್ಮ ತಾಳ್ಮೆ ಕಳಕೊಳ್ಳಬೇಡಿ ಎಂದು ಚೆನ್ನಿತ್ತಲ ಯುಡಿಎಫ್ ಕಾರ್ಯಕರ್ತರನ್ನು ಒತ್ತಾಯಿಸಿದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries