ಕಾಸರಗೋಡು: ಜಿಲ್ಲೆಯಲ್ಲಿ2019 ಹಾಗೂ 20ನೇ ಸಾಲಿನ ಎರಡು ವರ್ಷ ಕಾಲಾವಧಿಯಲ್ಲಿ 252 ವಿದ್ಯುತ್ ಕಳವು ಪ್ರಕರಣಗಳನ್ನು ಕೇರಳ ವಿದ್ಯುತ್ ನಿಗಮದ ವಿಜಿಲೆನ್ಸ್ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಈ ಮೂಲಕ 1.27 ಕೋಟಿ ರೂ. ದಂಡ ವಸೂಲಿ ಮಾಡಲಾಗಿದೆ.
2021ರಲ್ಲಿ ಮಾರ್ಚ್ ತಿಂಗಳ ವರೆಗೆ ಒಟ್ಟು 95ಪ್ರಕರಣ ದಾಖಲಾಗಿದ್ದು, ಈ ಮೂಲಕ 1.88ಕೋಟಿ ರೂ. ದಂಡ ವಸೂಲಿ ಮಾಡಲಾಗಿದೆ. 2020ನೇ ಸಾಲಿನಲ್ಲಿ ಒಟ್ಟು 71ಪ್ರಕರಣಗಳಲ್ಲಿ 76ಲಕ್ಷ ದಂಡ ವಸೂಲಿ ಮಾಡಲಾಗಿದೆ. ಬಹುತೇಕ ಕಡೆ ವಿದ್ಯುತ್ ಮೀಟರ್ ವಂಚನಾ ಪ್ರಕರಣ ಬೆಳಕಿಗೆ ಬಂದಿದೆ. ಮೀಟರ್‍ಗೆ ಸಾಗುವ ವಿದ್ಯುತ್ ತಂತಿಯನ್ನು ತುಂಡರಿಸಿ ಈ ರೀತಿ ವಂಚನೆಯೆಸಗಲಾಗುತ್ತಿದೆ. ವಿದ್ಯುತ್ ವಿಜಿಲೆನ್ಸ್ ವಿಭಾಗ ರಾತ್ರಿ ವೇಳೆ ದಾಳಿ ಕಾರ್ಯಾಚರಣೆ ನಡೆಸುವ ಮೂಲಕ ವಂಚನೆ ಪತ್ತೆಹಚ್ಚುತ್ತಿರುವುದಾಗಿ ವಿದ್ಯುತ್ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.