ತಿರುವನಂತಪುರ: ರಾಜ್ಯ ವಿಶೇಷ ಶಾಖೆಯಲ್ಲಿ ವಿಶೇಷ ಶಾಖೆ ಸಹಾಯಕ ಗ್ರೇಡ್ 2(ಸ್ಪಶೆಲ್ ಗ್ರೇಡ್ ಅಸಿಸ್ಟೆಂಟ್) ಹುದ್ದೆಯಲ್ಲಿ ತಾತ್ಕಾಲಿಕ ನೇಮಕಾತಿಗಾಗಿ ಏಪ್ರಿಲ್ 25 ರಂದು ನಿಗದಿಯಾಗಿದ್ದ ಲಿಖಿತ ಪರೀಕ್ಷೆಯನ್ನು ರದ್ದುಪಡಿಸಲಾಗಿದೆ. ಕೋವಿಡ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪರೀಕ್ಷೆ ರದ್ದುಪಡಿಸಲಾಗಿದ್ದು, ಮುಂದಿನ ದಿನಾಂಕವನ್ನು ಶೀಘ್ರ ಪ್ರಕಟಿಸಲಾಗುವುದೆಂದು ಅಧಿಕೃತರು ತಿಳಿಸಿದ್ದಾರೆ.