ಥಾಣೆ: ದೇಶಾದ್ಯಂತ ಆಸ್ಕಿಜನ್ ಕೊರತೆಯಿಂದ ಹಲವು ಕೊರೋನಾ ಸೋಂಕಿತರು ಸಾವನ್ನಪ್ಪುತ್ತಿದ್ದು, ಪ್ರಸ್ತುತ ವೈದ್ಯಕೀಯ ಆಮ್ಲಜನಕದ ಕೊರತೆಯನ್ನು ಗಮನದಲ್ಲಿಟ್ಟುಕೊಂಡು, ಮಹಾರಾಷ್ಟ್ರದ ಅಹ್ಮದ್‌ನಗರ ಜಿಲ್ಲೆಯ ವೈದ್ಯರೊಬ್ಬರು, ತಮ್ಮ ರೋಗಿಗಳಿಗೆ ತಲಾ ಒಂದು ಸಸಿ ನೆಡುವಂತೆ ತಮ್ಮ ಪ್ರಿಸ್ಕ್ರಿಪ್ಷನ್ ನಲ್ಲಿ ಬರೆದು ಕೊಡುತ್ತಿದ್ದಾರೆ.
ಅಹ್ಮದ್‌ನಗರದ ಸಂಜೀವನಿ ಆಸ್ಪತ್ರೆ ನಡೆಸುತ್ತಿರುವ ಡಾ.ಕೋಮಲ್ ಕಸರ್ ಅವರು ಕಳೆದ ಒಂದು ತಿಂಗಳಿನಿಂದ ಈ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ.
ಕಸರ್ ಅವರ ವೈದ್ಯಕೀಯ ಪ್ರಿಸ್ಕ್ರಿಪ್ಷನ್ ನಲ್ಲಿ ಒಂದು ಅಡಿಬರಹ ಇದ್ದು, ಕಾಯಿಲೆಯಿಂದ ಚೇತರಿಸಿಕೊಂಡ ನಂತರ ಸಸಿಗಳನ್ನು ನೆಡಬೇಕು ಎಂದು ರೋಗಿಗಳಿಗೆ ಮನವಿ ಮಾಡಲಾಗಿದೆ.
"ಕೊರೋನಾ ಸಾಂಕ್ರಾಮಿಕ ಆರಂಭವಾದ ನಂತರ ನಾನು ರೆಮ್ಡೆಸಿವಿರ್, ವೆಂಟಿಲೇಟರ್‌ಗಳಿಗಾಗಿ ಹಲವು ಕರೆಗಳನ್ನು ಸ್ವೀಕರಿಸುತ್ತಿದ್ದೆ. ಕೆಲವು ದಿನಗಳಿಂದೆ, ನಾನು ಆಮ್ಲಜನಕ ಪೂರೈಕೆಗಾಗಿ ಕರೆಗಳು ಬರಲು ಆರಂಭಿಸಿದವು. ಇದು ನನ್ನ ಮನಸ್ಸಿನಲ್ಲಿ ಒಂದು ಕಲ್ಪನೆಯನ್ನು ಹುಟ್ಟುಹಾಕಿತು. ನನ್ನ ವೈದ್ಯಕೀಯ ಪ್ರಿಸ್ಕ್ರಿಪ್ಷನ್ ಕೆಳಭಾಗದಲ್ಲಿ ಒಂದು ಸಾಲು ಬರೆಯಲು ಪ್ರಾರಂಭಿಸಿದೆ ಇದು ರೋಗಿಗಳಿಗೆ ಆಮ್ಲಜನಕವನ್ನು ನೀಡುವಂತಹ ಸಸಿ ನೆಡಲು ನಾನು ಒತ್ತಾಯಿಸುತ್ತೇನೆ" ಎಂದು ಡಾ.ಕೋಮಲ್ ಕಸರ್ ಹೇಳಿದ್ದಾರೆ.