HEALTH TIPS

ಕರೊನಾ ಲಸಿಕೆಯ ಸುತ್ತ. ವಾಟ್ಸ್​​ಆಯಪ್​ನಲ್ಲಿ ಬಂದಿವೆ ಹೊಸ ಸ್ಟಿಕ್ಕರ್ಸ್ !

        ನವದೆಹಲಿ : ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂ.ಹೆಚ್.ಒ.)ಯ ಸಹಭಾಗಿತ್ವದಲ್ಲಿ ಸಾಮಾಜಿಕ ನೆಟ್​ವರ್ಕಿಂಗ್ ಸಂಸ್ಥೆ ವಾಟ್ಸ್​ಆಯಪ್, ಹೊಸ ಸ್ಟಿಕ್ಕರ್ ಪ್ಯಾಕ್​ ಒಂದನ್ನು ಬಿಡುಗಡೆ ಮಾಡಿದೆ. 'ವಾಕ್ಸೀನ್ಸ್ ಫಾರ್ ಆಲ್' ಎಂಬ ಶೀರ್ಷಿಕೆಯ ಈ ಸ್ಟಿಕ್ಕರ್​ ಪ್ಯಾಕ್​ಅನ್ನು ಕರೊನಾ ಲಸಿಕೆಗಳ ವಿಷಯವನ್ನು ಆಧರಿಸಿ ಡಬ್ಲ್ಯೂ.ಹೆಚ್.ಒ. ವಿನ್ಯಾಸಗೊಳಿಸಿದೆ ಎನ್ನಲಾಗಿದೆ.

         ಕರೊನಾ ಲಸಿಕೆಗಳ ಬಗ್ಗೆ ತನ್ನ ಬಳಕೆದಾರರು ಹೆಚ್ಚು ಸೃಜನಶೀಲವಾಗಿ ಸಂಭಾಷಣೆ ನಡೆಸಲು ಮತ್ತು ಸಂತೋಷ ವ್ಯಕ್ತಪಡಿಸಲು ಈ ಸ್ಟಿಕ್ಕರ್ ಪ್ಯಾಕ್‌ಅನ್ನು ವಿನ್ಯಾಸಗೊಳಿಸಲಾಗಿದೆ. ಹಾಗೇ, ಸಾಂಕ್ರಾಮಿಕದ ಸಂದರ್ಭದಲ್ಲಿ ಅಪ್ರತಿಮ ಸೇವೆ ಸಲ್ಲಿಸುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ ಮೆಚ್ಚುಗೆಯನ್ನು ತೋರಿಸಲು ಸಹಾಯಕವಾಗಲಿದೆ ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.

        'ಪ್ರಪಂಚದಾದ್ಯಂತ ಕರೊನಾ ಲಸಿಕೆಯನ್ನು ಹೊರತರಲಾಗುತ್ತಿರುವುದರಿಂದ, ಲಸಿಕೆ ತೆಗೆದುಕೊಳ್ಳುವುದನ್ನು ಉತ್ತೇಜಿಸುವ ಗುರಿಯಿಂದ ಈ ಪ್ಯಾಕ್​ಅನ್ನು ತರಲಾಗಿದೆ. ಇದು ಭರವಸೆಯನ್ನು ಪ್ರತಿನಿಧಿಸುತ್ತದೆ' ಎಂದು ಡಬ್ಲ್ಯೂ.ಹೆಚ್.ಒ.ನ ಡಿಜಿಟಲ್ ಚಾನೆಲ್‌ಗಳ ಟೀಮ್ ಲೀಡರ್ ಆಂಡಿ ಪ್ಯಾಟಿಸನ್ ಹೇಳಿದ್ದಾರೆ. 'ಕೋವಿಡ್-19 ಲಸಿಕೆಗಳು ಗೇಮ್ ಚೇಂಜರ್ ಆಗಿವೆ. ಆದರೆ, ಸದ್ಯಕ್ಕೆ, ನಾವು ಮಾಸ್ಕ್ ಧರಿಸುವುದನ್ನು ಮುಂದುವರಿಸಬೇಕು, ದೈಹಿಕವಾಗಿ ದೂರವಿರಬೇಕು, ಜನಸಂದಣಿಯನ್ನು ತಪ್ಪಿಸಬೇಕು, ಒಳಾಂಗಣ ಸ್ಥಳಗಳಲ್ಲಿ ಚೆನ್ನಾಗಿ ಗಾಳಿ ಇರುವಂತೆ ನೋಡಿಕೊಳ್ಳಬೇಕು, ಮತ್ತು ಕೈಗಳನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು' ಎಂದಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries