ಮಂಜೇಶ್ವರ: ಕೇರಳದಲ್ಲಿ ವಿಧಾನ ಸಭಾಶ ಚುನಾವಣಾ ಹಿನ್ನೆಲೆಯಲ್ಲಿ ಅತೀ ಹೆಚ್ಚು ಗಮನ ಕೇಂದ್ರೀಕರಿಸಿರುವ ಕ್ಷೇತ್ರಗಳಲ್ಲಿ ಮಂಜೇಶ್ವರ ಒಂದು. ಬಿಜೆಪಿ ಕಳೆದ ಬಾರಿ ಕೇವಲ 89 ಮತಗಳಿಂದ ಪರಾಭವಗೊಂಡಿತ್ತು. ಬಿಜೆಪಿ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್ ಅವರು ಮತ್ತೆ ಕಣಕ್ಕಿಳಿದಿರುವುದು ತುಳು ನಾಡಿನ ರಾಜಕೀಯ ಹೋರಾಟದ ಗಮನ ಸೆಳಯುತ್ತಿದೆ. 2011 ಮತ್ತು 2016 ರಲ್ಲಿ ಸುರೇಂದ್ರನ್ ಎರಡನೇ ಸ್ಥಾನ ಗಳಿಸಿರುವುದಕ್ಕೂ ಮಂಜೇಶ್ವರ ಗಮನಾರ್ಹವಾಗಿದೆ. ಒಂದು ಉಪಚುನಾವಣೆ ಸೇರಿದಂತೆ ಮೂರು ವಿಧಾನಸಭಾ ಚುನಾವಣೆಗಳಲ್ಲಿ ಮುಸ್ಲಿಂ ಲೀಗ್ ಅಭ್ಯರ್ಥಿ ಗೆದ್ದಿರುವ ಕಾರಣ ಯುಡಿಎಫ್ ಕ್ಷೇತ್ರವನ್ನು ಉಳಿಸಿಕೊಳ್ಳುವ ಹಠದಲ್ಲಿದೆ.
ಮಂಜೇಶ್ವರದ ಯುವ ನೇತಾರ ಎಕೆಎಂ ಅಶ್ರಫ್ ಯುಡಿಎಫ್ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಸ್ಥಳೀಯರಾಗಿ, ಯುಡಿಎಫ್ ಭಾಷಾ ಅಲ್ಪಸಂಖ್ಯಾತ ಮತಗಳನ್ನು ಮತ್ತು ಕಾಂಗ್ರೆಸ್ ಮತಗಳನ್ನು ಗುರಿಯಾಗಿಸಿಕೊಂಡಿದೆ. ಎಲ್ಡಿಎಫ್ ತನ್ನ ಯಶಸ್ಸನ್ನು 2006 ರಿಂದಲೇ ಕಳೆದುಕೊಂಡಿದೆ. 2011, 2016 ರ ವಿಧಾನ ಸಭಾ ಚುನಾವಣೆ ಮತ್ತು 2019 ರ ಉಪಚುನಾವಣೆಯಲ್ಲಿ ಎಡರಂಗ ಇಲ್ಲಿ ಮೂರನೇ ಸ್ಥಾನಕ್ಕೆ ಇಳಿದಿದೆ. ಪ್ರಸ್ತುತ ಕಾಞಂಗಾಡ್ ಪುರಸಭೆಯ ಮಾಜಿ ಅಧ್ಯಕ್ಷ ವಿ.ವಿ.ರಮೇಶನ್ ಅವರನ್ನು ಈ ಬಾರಿ ಎಡರಂಗ ಕಣಕ್ಕಿಳಿಸಿದೆ.
ಗಡಿ ಕ್ಷೇತ್ರವಾದ ಮಂಜೇಶ್ವರ ಪ್ರಸ್ತುತ ಪ್ರಬಲ ತ್ರಿಕೋನ ಹೋರಾಟದ ಧಾವಂತದಲ್ಲಿದೆ. ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಪ್ರಚಾರ ಅಭಿಯಾನದಲ್ಲಿ ಪ್ರಗತಿ ಸಾಧಿಸುತ್ತಿರುವ ದೃಶ್ಯ ಕಂಡುಬಂದಿದೆ. ಮೂವರು ಅಭ್ಯರ್ಥಿಗಳು ಮೂರನೇ ಹಂತದ ಅಭಿಯಾನಕ್ಕೆ ಪ್ರವೇಶಿಸುತ್ತಿದ್ದಾರೆ. ಈ ಬಾರಿ ಕಮಲ ಅರಳುತ್ತದೆ ಎಂದು ಬಿಜೆಪಿ ಭರವಸೆಯಿಂದಿದೆ. ಇತರ ಕ್ಷೇತ್ರಗಳಿಗಿಂತ ಭಿನ್ನವಾಗಿ, ಅಭಿಯಾನವು ಮೂರು ಭಾಷೆಗಳಲ್ಲಿ ವಿವಿಧ ಗೋಡೆ ಬರಹ ಮತ್ತು ಪ್ರಕಟಣೆಗಳನ್ನು ಹೊಂದಿದೆ.
ಮಂಜೇಶ್ವರ ಕ್ಷೇತ್ರವು ಏಳು ಭಾಷೆಗಳನ್ನು ಮಾತನಾಡುವ ಜನರಿಂದ ಕೂಡಿದೆ. ಜಾತಿ ಮತ್ತು ಧಾರ್ಮಿಕ ಮತಗಳು ಸಹ ನಿರ್ಣಾಯಕ ಪ್ರಭಾವವನ್ನು ಹೊಂದಿವೆ. ಆದ್ದರಿಂದ, ಮೂವರು ಅಭ್ಯರ್ಥಿಗಳು ಮೊದಲು ಧಾರ್ಮಿಕ ಮುಖಂಡರನ್ನು ಭೇಟಿ ಮಾಡಿ ಮತಗಳನ್ನು ಪಡೆದುಕೊಳ್ಳಲು ಭಿನ್ನಮಿಸಿದ್ದಾರೆ. 89 ಮತಗಳನ್ನು ಕಳೆದುಕೊಂಡು ನಿರ್ಣಾಯಕ ಅಲ್ಪಮತದ ಸೋಲಿನ ಕಳಡೆದ ಚುನಾವಣೆಯ ನ್ಯೂನತೆಗಳನ್ನು ಅ|ಧ್ಯಯನ ಮಾಡಿರುವ ಬಿಜೆಪಿ ಪ್ರಸ್ತುತ ಭಾರೀ ಮುಂದಾಲೋಚನೆಯ ತಂತ್ರಗಾರಿಕೆ ಬಳಸುತ್ತಿರುವುದು ಗಮನಾರ್ಹವಾಗುತ್ತಿದೆ. ಸುರೇಂದ್ರನ್ ಅಭಿಯಾನಕ್ಕೆ ಕರ್ನಾಟಕ ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರು ರಂಗಕ್ಕಿಳಿದಿರುವುದು ಇದನ್ನು ಸಾಬೀತುಪಡಿಸಿದೆ. ಹೆಚ್ಚಿನ ಯುವಕರು ಅಭಿಯಾನದಲ್ಲಿ ಸಕ್ರಿಯರಾಗಿದ್ದಾರೆ. ಕಳೆದ ಬಾರಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ(ಬಿಎಸ್ಪಿ ಪಕ್ಷ) 367 ಮತಗಳನ್ನು ಪಡೆದ ಸುರೇಂದ್ರನ್ ಅಲಿಯಾಸ್ ಸುಂದರ ಅವರನ್ನು ಈ ಬಾರಿ ಬಿಜೆಪಿಯ ತೆಕ್ಕೆಗೆ ಸೇರಿಸಿಕೊಳ್ಳಲಾಗಿದೆ. ಆದ್ದರಿಂದ, ನಾಯಕರು ಗೆಲುವಿನ ಖಚಿತತೆಯಲ್ಲಿದ್ದಾರೆ.
ಯುಡಿಎಫ್ ಮತ್ತು ಬಿಜೆಪಿ ಯು ರಾಜ್ಯ ಸರ್ಕಾರದ ಚಿನ್ನದ ಕಳ್ಳಸಾಗಣೆ ಮತ್ತು ಹಿಂಬಾಗಿಲಿನ ನೇಮಕಾತಿಗಳ ವಂಚನೆಯ ವಿಷಯವನ್ನು ಪ್ರಧಾನವಾಗಿಸಿ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ರಮೇಶನ್ ಅವರ ಅಭಿಯಾನವು ರಾಜ್ಯ ಸರ್ಕಾರದ ಅಭಿವೃದ್ಧಿ ಸಾಧನೆಗಳನ್ನು ಎತ್ತಿ ತೋರಿಸಿದೆ ಮತ್ತು ಯುಡಿಎಫ್ ಮತ್ತು ಬಿಜೆಪಿಯ ಮೇಲೆ ದಾಳಿ ಮಾಡಿದೆ. ಮಂಗಲ್ಪಾಡಿ, ಕುಂಬಳೆ ಮತ್ತು ಎಣ್ಮಕಜೆ ಗ್ರಾಮ ಪಂಚಾಯಿತಿಗಳನ್ನು ಯುಡಿಎಫ್ ಮತ್ತು ವರ್ಕಾಡಿ, ಮೀಂಜ ಮತ್ತು ಪುತ್ತಿಗೆ ಪಂಚಾಯತ್‍ಗಳನ್ನು ಎಲ್‍ಡಿಎಫ್ ಕೇಂದ್ರೀಕರಿಸಿ ಪ್ರಚಾರ ನಡೆಸುತ್ತಿದೆ. ಮಂಜೇಶ್ವರ ಪಂಚಾಯತ್‍ನಲ್ಲಿ ಬಿಜೆಪಿ ಬೆಂಬಲಿತ ಸ್ವತಂತ್ರ ಸದಸ್ಯ ಅಧ್ಯಕ್ಷರು, ಪೈವಳಿಕೆ ಪಂಚಾಯತಿಯಲ್ಲಿ ಅಧ್ಯಕ್ಷರು ಎಲ್‍ಡಿಎಫ್ ಮತ್ತು ಉಪಾಧ್ಯಕ್ಷರು ಬಿಜೆಪಿ ಪಕ್ಷದವರು. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಯುಡಿಎಫ್ ಬಹುಮತವನ್ನು ಹೊಂದಿದ್ದು, ಕ್ಷೇತ್ರದಲ್ಲಿ ಬಿಜೆಪಿಗಿಂತ 5,000 ಮತಗಳು ಹೆಚ್ಚಿವೆ. ಎರಡನೇ ಸ್ಥಾನದಲ್ಲಿರುವ ಬಿಜೆಪಿಗೆ ಎಲ್‍ಡಿಎಫ್‍ಗಿಂತ ಕೇವಲ 2,000 ಮತಗಳು ಹೆಚ್ಚು. ಮೊದಲ ಸ್ಥಾನದಲ್ಲಿರುವ ಯುಡಿಎಫ್ ಮತ್ತು ಮೂರನೇ ಸ್ಥಾನದಲ್ಲಿರುವ ಎಲ್‍ಡಿಎಫ್ ನಡುವೆ 7,000 ಮತಗಳ ವ್ಯತ್ಯಾಸವಿದೆ.