HEALTH TIPS

ಕೊರೊನಾ ಅಂತ್ಯ ಕಾಲ ತುಂಬಾ ದೂರವಿದೆ ಎಂದ ವಿಶ್ವ ಆರೋಗ್ಯ ಸಂಸ್ಥೆ

Top Post Ad

Click to join Samarasasudhi Official Whatsapp Group

Qries

            ಜಿನೇವಾ: ಸಾಕಷ್ಟು ರಾಷ್ಟ್ರಗಳಲ್ಲಿ ಕೊರೊನಾ ಎರಡನೇ ಅಲೆ ಶುರುವಾಗಿದ್ದು, ಕೊರೊನಾ ಅಂತ್ಯಕಾಲ ತುಂಬಾ ದೂರವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

          ಕೊರೊನಾ ಸಾಂಕ್ರಾಮಿಕ ನಿಭಾಯಿಸಲು ವಿಶ್ವದ ರಾಷ್ಟ್ರಗಳು ಇನ್ನಿಲ್ಲದ ಕಷ್ಟ ಪಡುತ್ತಿವೆ. ಕೊರೋನಾ ಎದುರಿಸುವಲ್ಲಿ ಸಾಕಷ್ಟು ಗೊಂದಲಗಳಿವೆ.

        ಮನುಷ್ಯರ ಬೇಜವಾಬ್ದಾರಿತನದಿಂದಾಗಿ ಸಾಂಕ್ರಾಮಿಕ ಅಂತ್ಯಗೊಳ್ಳಲು ನಾವು ಇನ್ನು ಬಹು ದೂರ ಕ್ರಮಿಸಬೇಕಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್ ಒ) ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಎಚ್ಚರಿಕೆ ನೀಡಿದ್ದಾರೆ.

         ಕೊರೊನಾ ಸೋಂಕಿನಿಂದ ಚೇತರಿಸಿಕೊಂಡ ನಂತರವೂ ಹಲವಾರು ಸಮಸ್ಯೆಗಳು ಪ್ರಾರಂಭವಾಗುತ್ತವೆ ಎಂದು ಸಂಶೋಧನೆ ಹೇಳುತ್ತದೆ.

      ಕೊರೊನಾ ಸೋಂಕಿನಿಂದ ಚೇತರಿಸಿಕೊಳ್ಳುವ ಪ್ರತಿ ಮೂವರಲ್ಲಿ ಒಬ್ಬರು ನರ ಸಮಸ್ಯೆಗಳು ಅಥವಾ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ. ಕೊರೊನಾ ಸೋಂಕು ತಗುಲಿದ ಮೊದಲ ಆರು ತಿಂಗಳಲ್ಲಿ ಸುಮಾರು ಶೇ. 34ರಷ್ಟು ಮಂದಿಯ ಮೇಲೆ ಪ್ರಭಾವ ಉಂಟಾಗಿದೆ.

       ಅತ್ಯಾಧುನಿಕ ವೈದ್ಯಕೀಯ ಕ್ರಮಗಳ ಮೂಲಕ ಕೆಲ ತಿಂಗಳ ಅವಧಿಯಲ್ಲಿ ಕೊರೋನಾ ಸಾಂಕ್ರಾಮಿಕ ನಿಯಂತ್ರಿಸಬಹುದು ಎಂಬುದು ದೃಢಪಟ್ಟಿದೆ.

        ಈ ವರ್ಷದ ಮೊದಲ ಎರಡು ತಿಂಗಳ ಅಂಕಿ ಅಂಶ ನೋಡಿದರೆ ಅದು ಅರ್ಥವಾಗುತ್ತದೆ ಎಂದು ಅವರು ಹೇಳಿದ್ದಾರೆ. ಕಳೆದ ಎರಡು ತಿಂಗಳಲ್ಲಿ ಸಾವು, ಹೊಸ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಕುಸಿದಿದೆ ಎಂದು ಟೆಡ್ರೊಸ್ ವಿವರಿಸಿದ್ದಾರೆ.

     ವೈರಸ್ ಅನ್ನು ನಿಯಂತ್ರಿಸಬಹುದು ಹಾಗೂ ರೂಪಾಂತರಿಗಳನ್ನು ತಡೆಯಬಹುದು ಎಂಬುದು ಸ್ಪಷ್ಟವಾಗಿದೆ. ಕೆಲವು ದೇಶಗಳಲ್ಲಿ ಕೊರೊನಾ ಹೆಚ್ಚಳಗೊಂಡಿದ್ದರೂ, ನೈಟ್ ಕ್ಲಬ್ ಗಳು, ರೆಸ್ಟೋರೆಂಟ್ ಗಳು ಹಾಗೂ ಮಾರುಕಟ್ಟೆಗಳು ಜನ ದಟ್ಟಣಿಯಿಂದ ತುಂಬಿ ಹೋಗಿವೆ. ಜನರ ಬೇಜವ್ದಾರಿತನ ತೊಲಗಬೇಕು ಎಂದು ಅವರು ಹೇಳಿದ್ದಾರೆ.

      ಆದರೆ ಕಳೆದ ಎರಡು ವಾರಗಳಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಶೇ. 9ರಷ್ಟು ಹೆಚ್ಚಳ, ಸಾವುಗಳಲ್ಲಿ ಶೇ. 5ರಷ್ಟು ಹೆಚ್ಚಳ ಕಂಡುಬಂದಿದೆ.


Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries