ಕಾಸರಗೋಡು: ಇತರ ರಾಜ್ಯಗಳಿಂದ, ವಿದೇಶಗಳಿಂದ ಕೇರಳಕ್ಕೆ ಆಗಮಿಸುವವರು ಆರ್.ಟಿ.ಪಿ.ಸಿ.ಆರ್. ತಪಾಸಣೆಗೆ ಒಳಗಾಗಬೇಕು ಮತ್ತು ಕೋವಿಡ್ ಜಾಗ್ರತಾ ಪೆÇೀರ್ಟಲ್ ನಲ್ಲಿ ನೋಂದಣಿ ನಡೆಸಬೇಕು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ಈ ವಿಚಾರಗಳ ಮಾನಿಟರಿಂಗ್ ಹೊಣೆ ಸ್ಥಳೀಯಾಡಳಿತ ಸಂಸ್ಥೆಗಳಿಗೆ ನೀಡಲಾಗಿದೆ. ಇತರೆಡೆಗಳಿಂದ ಆಗಮಿಸಿದವರು ಕಡ್ಡಾಯ ಕ್ವಾರೆಂಟೈನ್ ಪಾಲನೆ ನಡೆಸಬೇಕಿದ್ದು, ಸ್ಥಳೀಯಾಡಳಿತ ಸಂಸ್ಥೆಗಳು ಖಚಿತತೆ ಮೂಡಿಸಬೇಕು ಎಂದಿರುವರು.