ಕಾಸರಗೋಡು: ವಿಧಾನಸಭೆ ಕ್ಷೇತ್ರ ಚುನಾವಣೆ ಸಂಬಂಧ ಕಾಸರಗೋಡು ಜಿಲ್ಲೆಯ ಮತಗಟ್ಟೆಗಳಲ್ಲಿ ಕೋವಿಡ್ ಸಂಹಿತೆಯ ಕಡ್ಡಾಯ ಪಾಲನೆ ನಡೆಸುವಂತೆ ಜಿಲ್ಲಾಡಳಿತೆ ಆದೇಶಿಸಿದೆ.
ಮತದಾನ ನಡೆಸಿದ ನಂತರ ಗುಂಪು ಸೇರದೆ ಮತದಾತರು ನೇರವಾಗಿ ತಮ್ಮ ನಿವಾಸಗಳಿಗೆ ತೆರಳಬೇಕು. ಮನೆಗೆ ತಲಪಿದ ತಕ್ಷಣ ಬಟ್ಟೆಬರೆ ಒಗೆದು, ನಂತರ ಸ್ನಾನ ಮಾಡಿ ಮನೆಯ ಇತರ ಸದಸ್ಯರೊಂದಿಗೆ ವ್ಯವಹರಿಸಬೇಕು. ಮತದಾನ
ನಡೆಸಲು ಪ್ರವೇಶಿಸುವ ವೇಳೆ ಮತ್ತು ಮರಳುವ ವೇಳೆ ಕೈಗಳ ಶುಚೀಕರಣಕ್ಕೆ ಸಾನಿಟೈಸರ್ ನೀಡಲಾಗುವುದು. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಮತಗಟ್ಟೆಗಳಲ್ಲಿ ಒಂದು ಮೀಟರ್ ಅಂತರದಲ್ಲಿ ಪ್ರತ್ಯೇಕ ಗುರುತುಗಳು ಇರುವುವು.
ಮತದಾತರ ಗಮನಕ್ಕೆ
ಬಾಯಿ ಮತ್ತು ಮೂಗು ಭದ್ರವಾಗಿ ಮುಚ್ಚಿಕೊಳ್ಳುವ ರೀತಿ ಮಾಸ್ಕ್ ಧರಿಸಬೇಕು. ಮಾತನಾಡುವ ವೇಳೆ ಮಾಸ್ಕ್ ಸರಿಸಬಾರದು.
ಗುರುತು ಅಗತ್ಯವಾದಲ್ಲಿ ಮಾತ್ರ ಮಾಸ್ಕ್ ಸರಿಸಬೇಕು.
ಸಾಮಾಜಿಕ ಅಂತರ ಕಾಯ್ದುಕೊಂಡು ಮತದಾನಕ್ಕೆ ಸಾಲು ನಿಲ್ಲಬೇಕು.
ಮತಗಟ್ಟೆಗೆ ಪ್ರವೇಶಿಸುವ ಮುನ್ನ ಮತ್ತು ಹೊರಬಂದ ಮೇಲೆ ನೀರು, ಸಾಬೂನು ಬಳಸಿ ಕೈಗಳನ್ನು ತೊಳೆಯಬೇಕು.
ಮಕ್ಕಳನ್ನು ಜತೆಗೆ ಕತರೆತರಬಾರದು. ಇತರೊಂದಿಗೆ ಬೆರೆಯುವ ವೇಳೆ ಹಸ್ತಲಾಘವ ಇತ್ಯಾದಿ ನಡೆಸಕೂಡದು.
ಗುಂಪುಗೂಡಿ ನಿಲ್ಲಕೂಡದು. ಯಾವತ್ತೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.
ಸಾರ್ವಜನಿಕ ಪ್ರದೇಶದಲ್ಲಿ ಉಗುಳಕೂಡದು.
ಮತದಾನ ನಡೆಸಿದ ತಕ್ಷಣ ತಮ್ಮ ನಿವಾಸಗಳಿಗೇ ತೆರಳಬೇಕು.
ಮಧ್ಯಂತರ ವೇಳೆಗಳಲ್ಲಿ ಗೆಳೆಯರೊಂದಿಗೆ ಮಾತುಕತೆ ಮನೆಗಳಿಗೆ ಸಂದರ್ಶನ ನಡೆಸಬೇಕು.
ಮನೆಗೆ ತೆರಳಿದ ತಕ್ಷಣ ಬಟ್ಟೆ ಬರೆ ಒಗೆದು, ಸ್ನಾನ ಮಾಡಿದ ನಂತರವಷ್ಟೇ ಇತರ ಸದಸ್ಯರೊಂದಿಗೆ ವ್ಯವಸರಿಸಬೇಕು.