HEALTH TIPS

ಆರ್'ಟಿ-ಪಿಸಿಆರ್ ನೆಗೆಟಿವ್ ವರದಿಯೊಂದಿಗೆ ಮದುವೆಗೆ ಬನ್ನಿ: ಆಮಂತ್ರಣ ಪತ್ರಿಕೆಯಲ್ಲಿ ನವಜೋಡಿ ಮನವಿ

       ಉತ್ತರಾಖಂಡ; ಇತ್ತೀಚಿನ ದಿನಗಳಲ್ಲಿ ಕೊರೋನಾ ನಿಯಮಗಳನ್ನು ಗಾಳಿಗೆ ತೂರಿ ಮದುವೆ ಸಮಾರಂಭಗಳನ್ನು ನಡೆಸುವ ಜನರ ಮಧ್ಯೆ ಇಲ್ಲೊಂದು ನವಜೋಡಿ ಇತರರಿಗೆ ಮಾದರಿಯಾಗಿದ್ದಾರೆ.


       ಉತ್ತರಾಖಂಡದ ನವ ಜೋಡಿಯೊಂದು ಆರ್'ಟಿ-ಪಿಸಿಆರ್ ನೆಗೆಟಿವ್ ವರದಿಯೊಂದಿಗೆ ಮದುವೆಗೆ ಬರುವಂತೆ ಆಮಂತ್ರಣ ಪತ್ರಿಕೆಯಲ್ಲಿ ವಿನಂತಿ ಮಾಡಿಕೊಂಡಿದ್ದಾರೆ. ಆಮಂತ್ರಣ ಪತ್ರಿಕೆಯಲ್ಲಿಯೇ ಸುರಕ್ಷತಾ ಕ್ರಮದ ಬಗ್ಗೆ ನವಜೊಡಿ ಜಾಗೃತಿವಹಿಸಿ ಸಂದೇಶ ಪ್ರಕಟಿಸಿರುವುದು ವಿಶೇಷವಾಗಿದೆ.

         ವಿಜಯ್ ಸಿಂಗ್ ಮತ್ತು ವೈಶಾಲಿ ಎಂಬ ನವಜೋಡಿ ಇದೇ ಏಪ್ರಿಲ್ 24 ರಂದು ಜೈಪುರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ನವಜೋಡಿ ಮದುವೆ ಆಮಂತ್ರಣ ಪತ್ರದಲ್ಲಿ, ಮದುವೆಗೆ ಆಗಮಿಸುವ ಅತಿಥಿಗಳು ಕೊರೋನಾ ನೆಗೆಟಿವ್​ ವರದಿ ಕಡ್ಡಾಯವಾಗಿ ತರುವಂತೆ ವಿನಂತಿಸಿಕೊಂಡಿದ್ದಾರೆ. ಎಲ್ಲರೂ ದಯವಿಟ್ಟು ಟೆಸ್ಟ್​ ರಿಪೋರ್ಟ್​ ಹಿಡಿದುಕೊಂಡು ಮದುವೆಗೆ ಬನ್ನಿ ಎಂದು ತಿಳಿಸಿದ್ದಾರೆ.

       ಮದುವೆ ಆಮಂತ್ರಣ ಪತ್ರವನ್ನು ವಿತರಿಸುವ ಮೊದಲೇ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಭೆ ಸಮಾರಂಭ, ವಿವಾಹ ಕಾರ್ಯಕ್ರಮಗಳ ಕುರಿತು ಹೊಸ ಮಾರ್ಗಸೂಚಿಗಳನ್ನು ಹೊರಡಿಸುವ ಬಗ್ಗೆ ನಮಗೆ ತಿಳಿದಿತ್ತು. ಎಲ್ಲಾ ಮಾರ್ಗಸೂಚಿಗಳನ್ನು ಮದುವೆ ಸಮಾರಂಭದಲ್ಲಿ ನಾವು ಅನುಸರಿಸುತ್ತೇವೆ ಎಂದು ವರ ವಿಜಯ್ ಹೇಳಿದ್ದಾರೆ.

     ಮದುವೆಗೆ 300-400 ಜನರನ್ನು ಆಹ್ವಾನಿಸಲು ನಿರ್ಧರಿಸಿದ್ದೆವು. ಆದರೀಗ ಕೊರೋನಾ ಸೋಂಕು ಹೆಚ್ಚಾಗಿರುವ ಹಿನ್ನೆಲೆಯಲ್ಲಿ 30-40 ಜನರಿಗೆ ಮಾತ್ರ ಆಮಂತ್ರಣ ಪತ್ರಿಕೆ ನೀಡಲಾಗುತ್ತಿದೆ ಎಂದು ವಧು ವೈಶಾಲಿ ಹೇಳಿದ್ದಾರೆ.

     ಸಾಂಕ್ರಾಮಿಕ ರೋಗ ಅತ್ಯಂತ ಶೀಘ್ರಗತಿಯಲ್ಲಿ ಹರಡುತ್ತಿದೆ. ಹೀಗಾಗಿ ನಾವು ಅತ್ಯಂತ ಜಾಗರೂಕರಾಗಿ ಇರಬೇಕಿದೆ. ನಮ್ಮ ಶ್ರಮವು ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಆಗಿದೆ. ಸೋಂಕಿನಿಂದ ಜನರು ತಪ್ಪಿಸಿಕೊಳ್ಳಲು ಸಹಾಯವಾಗಲಿಗೆ ಎಂದು ತಿಳಿಸಿದ್ದಾರ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries