ಪತ್ತನಂತಿಟ್ಟು; ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ನಿನ್ನೆ ಸಂಜೆ ಶಬರಿಮಲೆ ಸಂದರ್ಶನ ನಡೆಸಿದರು. ಅವರು ಪಂಪ ಗಣಪತಿಕೋವಿಲ್‍ನಿಂದ ಇರುಮುಡಿಯೊಂದಿಗೆ ಬೆಟ್ಟ ಏರಿ ದರ್ಶನ ನಡೆಸಿದರು. ಹರಿಹರಸುತನ್ ಆಶ್ರಯದ ಡಾಲಿ ವ್ಯವಸ್ಥೆಯನ್ನು ನಿರಾಕರಿಸಿದ ಅವರು ಶರಣಂ ಸ್ಮರಿಸುತ್ತ ಸ್ವಾಮಿ ಅಯ್ಯಪ್ಪನ್ ರಸ್ತೆಯಲ್ಲಿ ನಡೆದು ಸನ್ನಿಧಾನಂ ತಲುಪಿದರು.
ರಾಜ್ಯಪಾಲರನ್ನು ತಿರುವಾಂಕೂರು ದೇವಸ್ವಂ ಮಂಡಳಿಯ ಅಧ್ಯಕ್ಷ ಅಡ್ವ.ಎನ್.ವಾಸು, ದೇವಸ್ವಂ ಮಂಡಳಿ ಸದಸ್ಯ ಅಡ್ವ, ಕೆ.ಎಸ್.ರವಿ ಮತ್ತು ದೇವಸ್ವಂ ಆಯುಕ್ತ ಬಿ.ಎಸ್.ತಿರುಮೇನಿ ಸ್ವಾಗತಿಸಿದರು.
ಪಡಿಪೂಜೆಯ ಬಳಿಕ ಇರುಮುಡಿ ಕಟ್ಟಿನೊಂದಿಗೆ ಹದಿನೆಂಟು ಮೆಟ್ಟಲು ಏರಿ ಕಲಿಯುಗ ವರದನ ದರ್ಶನಗೈದರು. ಇಂದು ಬೆಳಿಗ್ಗೆಯೂ ರಾಜ್ಯಪಾಲರು ದೇವರ ದರ್ಶನಗೈದು ಬಳಿಕ ಮಾಳಿಗÀಪ್ಪುರಂ ದೇವಾಲಯದ ಆವರಣದಲ್ಲಿ ಶ್ರೀಗಂಧದ ಸಸಿಗಳನ್ನು ನೆಡಲಿದ್ದಾರೆ. ಪುಣ್ಯಂ ಪೂಂಗಾವನಂ ಯೋಜನೆಯ ಭಾಗವಾಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ನಂತರ ಅವರು ಹಿಂದಿರುಗಲಿದ್ದಾರೆ. ರಾಜ್ಯಪಾಲರೊಂದಿಗೆ ಅವರ ಕಿರಿಯ ಮಗ ಕಬೀರ್ ಮೊಹಮ್ಮದ್ ಖಾನ್ ಇದ್ದರು.