ಕೊಚ್ಚಿ: ದೊಡ್ಡ ಪ್ರಮಾಣದ ಕೈಗಾರಿಕಾ ಅನಿಲ ಯೋಜನೆಗಳ ಅಭಿವೃದ್ಧಿಯಲ್ಲಿ ಜಾಗತಿಕ ನಾಯಕರಾಗಿರುವ ಏರ್ ಪ್ರಾಡಕ್ಟ್ಸ್, ಕೊಚ್ಚಿಯಲ್ಲಿನ ಕೈಗಾರಿಕಾ ಅನಿಲ ಸಂಕೀರ್ಣದಿಂದ ಭಾರತ್ ಪೆಟ್ರೋಲಿಯಂಗೆ ಸಿಂಥೆಟಿಕ್ ಅನಿಲ(ಸಂಶ್ಲೇಷಿತ ಅನಿಲ) ಸರಬರಾಜು ಮಾಡಲು ಪ್ರಾರಂಭಿಸಿದೆ.
ಕೊಚ್ಚಿ ತೈಲ ಸಂಸ್ಕರಣಾಗಾರದಲ್ಲಿ ಪೆÇ್ರಪೈಲೀನ್ ಉತ್ಪನ್ನಗಳ ಪೆಟ್ರೋಕೆಮಿಕಲ್ ಯೋಜನೆಗೆ (ಪಿಡಿಪಿಪಿ) ಸಿಂಥೆಟಿಕ್ ಗ್ಯಾಸ್ ಸರಬರಾಜು ಮಾಡಲಾಗುತ್ತಿದೆ. ಇದು ಕೊಚ್ಚಿಯಲ್ಲಿನ ಭಾರತ್ ಪೆಟ್ರೋಲಿಯಂನೊಂದಿಗಿನ ಏಪೆÇ್ರ್ರಡಕ್ಟಸ್ನ ಎರಡನೇ ವಿತರಕರ ಒಪ್ಪಂದವಾಗಿದೆ.
ಸಂಯೋಜಿತ ತೈಲ ಶುದ್ದೀಕರಣ ಕೇಂದ್ರ ಯೋಜನೆಗೆ (ಐ.ಆರ್.ಇ.ವಿ) ಈಗಾಗಲೇ ಭಾರತ್ ಪೆಟ್ರೋಲಿಯಂಗೆ ಏರ್ ಪ್ರಾಡಕ್ಟ್ಸ್ ಸರಬರಾಜು ಮಾಡುತ್ತಿದ್ದು, ಇದನ್ನು 2017 ರಲ್ಲಿ ಕಾರ್ಯಾರಂಭ ಮಾಡಿ ಇಂಟಿಗ್ರೇಟೆಡ್ ಆಯಿಲ್ ರಿಫೈನರಿ ಪ್ರಾಜೆಕ್ಟ್ (ಐಆರ್‍ಇಪಿ) ಗಾಗಿ ಉದ್ಘಾಟಿಸಲಾಯಿತು.
"ಭಾರತ್ ಪೆಟ್ರೋಲಿಯಂಗೆ ಪೆಟ್ರೋಕೆಮಿಕಲ್ಸ್ ಮಾರುಕಟ್ಟೆಗೆ ಪ್ರವೇಶಿಸಲು ಮತ್ತು ಸಿಂಥೆಟಿಕ್ ಗ್ಯಾಸ್ ನ್ನು ಪೂರೈಸಲು ಸಹಾಯ ಮಾಡುತ್ತಿರುವುದಕ್ಕೆ ನಾವು ಸಂತೋಷಪಡುತ್ತೇವೆ" ಎಂದು ಏರ್ ಪ್ರಾಡಕ್ಟ್ಸ್ ಮುಖ್ಯ ಕಾರ್ಯಾಚರಣಾ ಅಧಿಕಾರಿ ಸಮೀರ್ಜೆ ಸೆರ್ಹಾನ್ ಹೇಳಿದರು. ಅವರ ತಂಡವು ಕೋವಿಡ್ ಅವಧಿಯಲ್ಲಿಯೂ ಪರಿಪೂರ್ಣ ಸಮರ್ಪಣೆಯೊಂದಿಗೆ ಕೆಲಸ ಮಾಡಿತು. ಗ್ರಾಹಕರಿಗೆ ದೊಡ್ಡ ಪ್ರಮಾಣದ ಅನಿಲ ಯೋಜನೆಗಳನ್ನು ಸಿದ್ಧಪಡಿಸುವ ಸಾಮಥ್ರ್ಯವನ್ನು ಈ ಯೋಜನೆಯು ಜಾರಿಗೊಳಿಸಲಾಗುತ್ತಿದೆ ಎಂದು ಅವರು ಹೇಳಿದರು.
ಈ ಕುರಿತು ಪ್ರತಿಕ್ರಿಯಿಸಿದ ಬಿಪಿಸಿಎಲ್ ಕೊಚ್ಚಿ ರಿಫೈನರಿ ಕಾರ್ಯನಿರ್ವಾಹಕ ನಿರ್ದೇಶಕ ಸಂಜಯ್ ಖನ್ನಾ ಅವರು ಇದು ಸ್ವಾವಲಂಬನೆಯ ಬಗ್ಗೆ ಭಾರತದ ದೃಷ್ಟಿಕೋನವನ್ನು ಬೆಂಬಲಿಸಲು ಭಾರತದ ಪ್ರಮುಖ ಬಹುರಾಷ್ಟ್ರೀಯ ಕಂಪನಿಯ ಹೂಡಿಕೆಯನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದರು. ಅಕ್ರಿಲಿಕ್ ಆಸಿಡ್, ಆಕ್ಸೊ ಆಲ್ಕೋಹಾಲ್ ಮತ್ತು ಅಕ್ರಿಲೇಟ್ಗಾಗಿ ವಾಯು ಉತ್ಪನ್ನ ಪೂರೈಕೆ ಈ ಯೋಜನೆಯ ಪ್ರಮುಖ ಮೈಲುಗಲ್ಲುಗಳಾಗಲಿವೆ.