ನವದೆಹಲಿ: ದೇಶದಲ್ಲಿ ಕೋವಿಡ್-19 ಪ್ರಕರಣಗಳು ದಿನೇದಿನೇ ಹೆಚ್ಚುತ್ತಿವೆ. ಇನ್ನೊಂದೆಡೆ, ವೈರಸ್ ಪ್ರತಿರೋಧಕ ಔಷಧ ರೆಮ್‌ಡಿಸಿವಿರ್‌ಗೆ ಬೇಡಿಕೆಯೂ ಹೆಚ್ಚಿರುವ ಕಾರಣ ಈ ಔಷಧದ ಉತ್ಪಾದನೆಯನ್ನು ದ್ವಿಗುಣಗೊಳಿಸಲಾಗುವುದು ಕೇಂದ್ರ ಸರ್ಕಾರ ಹೇಳಿದೆ.
ರೆಮ್‌ಡಿಸಿವಿರ್ ಉತ್ಪಾದನೆಯನ್ನು ಹೆಚ್ಚಿಸುವ ಸಲುವಾಗಿ ಹೆಚ್ಚುವರಿ 20 ಘಟಕಗಳ ಸ್ಥಾಪನೆಗೆ ಅನುಮೋದನೆ ನೀಡುವಂತೆ ಔಷಧ ಕಂಪನಿಗಳು ಬೇಡಿಕೆ ಸಲ್ಲಿಸಿದ್ದವು. ಕಂಪನಿಗಳ ಈ ಬೇಡಿಕೆಗೆ ಕೇಂದ್ರ ಸರ್ಕಾರ ಅನುಮೋದನೆಯನ್ನೂ ನೀಡಿದೆ ಎಂದು ಮೂಲಗಳು ಹೇಳಿವೆ.
ಸದ್ಯ, ದೇಶದ ವಿವಿಧೆಡೆ ಇಂಥ 20 ಉತ್ಪಾದನಾ ಘಟಕಗಳಿವೆ. ಈಗ ದಿನಕ್ಕೆ ಈ ಔಷಧದ 1.5 ಲಕ್ಷ ವಯಲ್‌ಗಳನ್ನು ಉತ್ಪಾದಿಸಲಾಗುತ್ತಿದ್ದು, ಶೀಘ್ರವೇ ಪ್ರತಿದಿನ 3 ಲಕ್ಷ ವಯಲ್‌ಗಳನ್ನು ಉತ್ಪಾದಿಸಲಾಗುವುದು ಎಂದು ಕೇಂದ್ರ ರಾಸಾಯನಿಕ ಹಾಗೂ ಗೊಬ್ಬರ ಖಾತೆ ರಾಜ್ಯ ಸಚಿವ ಮನಸುಖ್ ಮಾಂಡವೀಯ ಹೇಳಿದರು.
ಅಮೆರಿಕದ ಗಿಲೀಡ್ ಸೈನ್ಸಸ್‌ನ ಪರವಾನಗಿಯೊಂದಿಗೆ ದೇಶದ ಏಳು ಕಂಪನಿಗಳು ರೆಮ್‌ಡಿಸಿವಿರ್ ಔಷಧವನ್ನು ಉತ್ಪಾದಿಸುತ್ತಿವೆ.