ನವದೆಹಲಿ: ಕೇಂದ್ರ ಸರ್ಕಾರದ ಮಧ್ಯಪ್ರವೇಶದ ಬೆನ್ನಲ್ಲೇ ರೆಮ್‌ಡೆಸಿವಿರ್ ಚುಚ್ಚುಮದ್ದಿನ ಬೆಲೆಯನ್ನು ವಿವಿಧ ಔಷಧ ಕಂಪನಿಗಳು ಸ್ವಯಂಪ್ರೇರಣೆಯಿಂದ ಕಡಿತಗೊಳಿಸಿವೆ ಎಂದು ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ(ಎನ್‌ಪಿಪಿಎ) ಶನಿವಾರ ತಿಳಿಸಿದೆ.
ಔಷಧ ಕಂಪನಿಗಳಾದ ಕ್ಯಾಡಿಲಾ ಹೆಲ್ತ್‌ಕೇರ್, ಡಾ. ರೆಡ್ಡಿಸ್ ಲ್ಯಾಬೊರೇಟರೀಸ್ ಮತ್ತು ಸಿಪ್ಲಾ ಸೇರಿದಂತೆ ಆಯಾ ಬ್ರಾಂಡ್‌ಗಳಾದ ರೆಮ್‌ಡೆಸಿವಿರ್ ಇಂಜೆಕ್ಷನ್ (100ಮಿಗ್ರಾಂ/ವೈಲ್) ಬೆಲೆಯನ್ನು ಕಡಿತಗೊಳಿಸಿವೆ. ಕೋವಿಡ್ 19 ಚಿಕಿತ್ಸೆಗಾಗಿ ಆಂಟಿವೈರಲ್ ಔಷಧಿಯನ್ನು ಬಳಸಲಾಗುತ್ತದೆ.
'ಸರ್ಕಾರದ ಮಧ್ಯಸ್ಥಿಕೆಯಿಂದಾಗಿ, #ರೆಮ್‌ಡೆಸಿವಿರ್ ಇಂಜೆಕ್ಷನ್‌ನ ಬೆಲೆ ಈಗ ಕಡಿಮೆಯಾಗಿದೆ! ಕೋವಿಡ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಸರ್ಕಾರದೊಂದಿಗೆ ಕೈಜೋಡಿಸಿದ ಔಷಧೀಯ ಕಂಪನಿಗಳಿಗೆ ನಾನು ಕೃತಜ್ಞನಾಗಿದ್ದೇನೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರಗಳ ರಾಜ್ಯ ಸಚಿವ ಮನ್ಸುಖ್ ಎಲ್ ಮಾಂಡವಿಯಾ ಟ್ವೀಟ್ ಮಾಡಿದ್ದಾರೆ.
ಎನ್‌ಪಿಪಿಎ ಹಂಚಿಕೊಂಡ ವಿವರಗಳ ಪ್ರಕಾರ, ಕ್ಯಾಡಿಲಾ ಹೆಲ್ತ್‌ಕೇರ್ ತನ್ನ ರೆಮ್‌ಡಾಕ್(ರೆಮ್‌ಡೆಸಿವಿರ್ 100ಮಿಗ್ರಾಂ) ಚುಚ್ಚುಮದ್ದಿನ ಬೆಲೆಯನ್ನು ಹಿಂದಿನ 2,800 ರೂ.ಗಳಿಂದ 899 ರೂ.ಗೆ ಇಳಿಸಿದೆ.
ಇನ್ನು ಸಿಂಜೀನ್ ಇಂಟರ್ನ್ಯಾಷನಲ್ ತನ್ನ ಬ್ರಾಂಡ್ ರೆಮ್ವಿನ್ ಬೆಲೆಯನ್ನು ಈ ಹಿಂದೆ 3,950 ರೂ.ಗಳಿಂದ 2,450 ರೂ.ಗೆ ಇಳಿಸಿದೆ.
ಹೈದರಾಬಾದ್ ಮೂಲದ ಡಾ.ರೆಡ್ಡಿ'ಸ್ ಲ್ಯಾಬೊರೇಟರೀಸ್ ಈ ಹಿಂದೆ 5,400 ರೂ.ಗಳ ಬೆಲೆ ಹೊಂದಿದ್ದ ರೆಡಿಎಕ್ಸ್ ಬೆಲೆಯನ್ನು ಈಗ 2,700 ರೂ.ಗೆ ಇಳಿಸಿದೆ.
ಅಂತೆಯೇ, ಸಿಪ್ಲಾ ತನ್ನ ಸಿಪ್ರೆಮಿ ಬ್ರಾಂಡ್ ಅನ್ನು ಹಿಂದಿನ 4,000 ರೂಗಳಿಂದ 3,000 ರೂಗಳಿಗೆ ಇಳಿಸಿದೆ.
ಮೈಲಾನ್ ತನ್ನ ಬ್ರಾಂಡ್‌ನ ಬೆಲೆಯನ್ನು 4,800 ರೂ.ಗಳಿಂದ 3,400 ರೂ.ಗೆ ಇಳಿಸಿದೆ.
ಜುಬಿಲೆಂಟ್ ಜೆನೆರಿಕ್ಸ್ ತನ್ನ ರೆಮ್‌ಡೆಸಿವಿರ್ ಬ್ರಾಂಡ್‌ನ ಬೆಲೆಯನ್ನು ಈ ಹಿಂದೆ 4,700 ರೂ.ಗಳಿಂದ 3,400 ರೂ.ಗೆ ಇಳಿಸಿದೆ.
ಹೆಟೆರೊ ಹೆಲ್ತ್‌ಕೇರ್ ತನ್ನ ಬ್ರಾಂಡ್ ಕೋವಿಫೋರ್‌ನ ಬೆಲೆಯನ್ನು ಈಗ 5,400 ರೂ.ಗಳಿಂದ 3,490 ರೂ.ಗೆ ಇಳಿಸಿದೆ.