ತಿರುವನಂತಪುರ: ಕೊರೋನಾ ವ್ಯಾಪಕತೆಯ ನಂತರ ರಾಜ್ಯದಲ್ಲಿ ನಿರ್ಬಂಧಗಳನ್ನು ಬಿಗಿಗೊಳಿಸಲಾಗುತ್ತಿದೆ. ಸರ್ಕಾರಿ ಕಚೇರಿಗಳಲ್ಲಿ ಕೇವಲ 50 ಶೇ. ಉದ್ಯೋಗಿಗಳಿಗೆ ಮಾತ್ರ ಅವಕಾಶವಿದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಇಲಾಖೆ ಮುಖ್ಯಸ್ಥರಿಗೆ ನಿರ್ದೇಶನ ನೀಡಲಾಗಿದೆ. ಮುಖ್ಯಮಂತ್ರಿಗಳು ಇಂದು ಕರೆದಿದ್ದ ಉನ್ನತ ಮಟ್ಟದ ಸಭೆಯಲ್ಲಿ ಈ ಪ್ರಸ್ತಾಪವನ್ನು ಮಾಡಲಾಗಿದೆ.
ವರ್ಕ್ ಪ್ರಂ ಹೋಂ ವ್ಯವಸ್ಥೆಯನ್ನು ಗರಿಷ್ಠ ಪ್ರಮಾಣದಲ್ಲಿ ಖಾಸಗಿ ವಲಯದಲ್ಲೂ ಜಾರಿಗೆ ತರಬೇಕು. ಶಾಲೆಗಳಲ್ಲಿ ತರಗತಿಗಳನ್ನು ಆನ್‍ಲೈನ್‍ನಲ್ಲಿ ನಡೆಸಬೇಕು. ತಡೆಗಟ್ಟುವ ಕ್ರಮಗಳಿಗಾಗಿ ಖಾಸಗಿ ಆಸ್ಪತ್ರೆ ಮಾಲೀಕರು ಮತ್ತು ರಾಜಕೀಯ ಪಕ್ಷದ ಮುಖಂಡರ ಸಭೆ ಕರೆಯಲಾಗುವುದು. ಲಸಿಕೆ ವಿತರಣೆಗೆ ಆನ್‍ಲೈನ್ ನೋಂದಣಿ ಜಾರಿಗೆ ತರಲಾಗುವುದು. ದಟ್ಟಣೆಯನ್ನು ಕಡಿಮೆ ಮಾಡಲು ಇಂತಹ ಕ್ರಮ ಕೈಗೊಳ್ಳಲಾಗುತ್ತಿದೆ.
ಮುಂದಿನ 24 ಮತ್ತು 25 ರಂದು ಮಾತ್ರ ಅಗತ್ಯ ಸೇವೆ ಇರುತ್ತದೆ. ಮುಂದಿನ ಎರಡು ವಾರಗಳವರೆಗೆ ಶನಿವಾರ ಮತ್ತು ಭಾನುವಾರದಂದು ಕಠಿಣ ನಿರ್ಬಂಧಗಳನ್ನು ವಿಧಿಸಲು ಸಭೆ ತೀರ್ಮಾನಿಸಿದೆ.