ತಿರುವನಂತಪುರ; ಹೆಚ್ಚುತ್ತಿರುವ ಕೊರೋನಾ ಹಿನ್ನೆಲೆಯಲ್ಲಿ ನಾಳೆಯಿಂದ ರಾಜ್ಯದಲ್ಲಿ ರಾತ್ರಿ ಕಫ್ರ್ಯೂ ವಿಧಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಪ್ರಮುಖ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕಫ್ರ್ಯೂ ರಾತ್ರಿ 9 ರಿಂದ ಬೆಳಿಗ್ಗೆ 6 ರವರೆಗೆ ಇರಲಿದೆ.
ಮುಂದಿನ ಎರಡು ವಾರಗಳವರೆಗೆ ಕಫ್ರ್ಯೂ ಜಾರಿಯಲ್ಲಿರಲಿದೆ. ಮಾಲ್‍ಗಳು ಮತ್ತು ಚಿತ್ರಮಂದಿರಗಳ ಕಾರ್ಯಾಚರಣೆಯನ್ನು ಸಂಜೆ 7 ಕ್ಕೆ ಇಳಿಸಲಾಗುವುದು. ಸಾರ್ವಜನಿಕ ಸಾರಿಗೆಗೆ ಯಾವುದೇ ನಿರ್ಬಂಧಗಳಿಲ್ಲ. ಸಾಧ್ಯವಾದಲ್ಲೆಲ್ಲಾ ವರ್ಕ್ ಎಟ್ ಹೋಂ ಜಾರಿಗೆ ತರಲು ಸಹ ಸೂಚಿಸಲಾಗಿದೆ.
ಮನೆ ಬೋಧನೆಗಳನ್ನು(ಹೋಂ ಟ್ಯೂಶನ್) ರದ್ದುಪಡಿಸಲು ನಿರ್ಧರಿಸಲಾಯಿತು. ಆನ್‍ಲೈನ್ ತರಗತಿಗಳನ್ನು ಮಾತ್ರ ಅನುಮತಿಸಲಾಗಿದೆ. ಸರಕು ಸಾಗಣೆಗೆ ಯಾವುದೇ ನಿರ್ಬಂಧಗಳಿಲ್ಲ. ತಪಾಸಣೆ ಬಲಪಡಿಸಲಾಗುವುದು.
ಸಭೆಯಲ್ಲಿ ವಿವಿಧ ಇಲಾಖೆಗಳ ಮುಖ್ಯಸ್ಥರು ಮತ್ತು ಪ್ರತಿನಿಧಿಗಳು ಭಾಗವಹಿಸಿದ್ದರು. ರಾಜ್ಯದಲ್ಲಿ ಕೊರೋನಾ ರೋಗಿಗಳ ಸಂಖ್ಯೆ ಕಳೆದ ಐದು ದಿನಗಳಿಂದ 10,000 ಕ್ಕಿಂತ ಹೆಚ್ಚಿದ್ದು, ಈ ಹಿನ್ನೆಲೆಯಲ್ಲಿ ತುರ್ತು ಸಭೆ ಕರೆಯಲ್ಪಟ್ಟಿತು. ರಾಜ್ಯ ಪೋಲೀಸರ ವರದಿಗಳನ್ನು ಆಧರಿಸಿ ರಾತ್ರಿ ಕಫ್ರ್ಯೂ ವಿಧಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.