ತಿರುವನಂತಪುರ: ಸಿಪಿಎಂ ರಾಜ್ಯಾದ್ಯಂತ ಹಿಂಸಾಚಾರಕ್ಕೆ ತೊಡಗಿಸಿಕೊಳ್ಳುತ್ತಿದೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ಹೇಳಿದ್ದಾರೆ. ಪೋಲೀಸರು ನಿಷ್ಕ್ರಿಯವಾಗಿದ್ದರೆ ಬಿಜೆಪಿ ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಾಗುವುದಿಲ್ಲ ಮತ್ತು ಬಲವಾದ ಪ್ರತ್ಯುತ್ತರ ನೀಡಬೇಕಾಗುತ್ತದೆ ಎಂದು ಕೆ ಸುರೇಂದ್ರನ್ ಎಚ್ಚರಿಸಿದ್ದಾರೆ.
ಸಿಪಿಎಂ ನಾಯಕರ ಅರಿವಿನೊಂದಿಗೆ ಹಿಂಸಾಚಾರ ಏಳುತ್ತಿದೆ. ಎಸ್‍ಡಿಪಿಐ ಸೇರಿದಂತೆ ಸಂಸ್ಥೆಗಳ ಬೆಂಬಲವನ್ನು ಸಿಪಿಎಂ ಹೊಂದಿದೆ. ಪೆÇಲೀಸರು ನಿಷ್ಕ್ರಿಯರಾಗಿದ್ದಾರೆ. ದುಷ್ಕರ್ಮಿಗಳು ಕೈಯಾರೆ ಸಿಕ್ಕಿದರೂ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಪೋಲೀಸರ ನಿಷ್ಕ್ರಿಯತೆಗೆ ಬಿಜೆಪಿಗೆ ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಾಗುವುದಿಲ್ಲ ಮತ್ತು ಪ್ರಬಲ ಪ್ರತ್ಯುತ್ತರ ನೀಡಬೇಕಾಗುತ್ತದೆ ಎಂದು ಕೆ ಸುರೇಂದ್ರನ್ ಹೇಳಿರುವರು.
ರಾಜ್ಯದಲ್ಲಿ ಅಂಚೆ ಮತದಾನದಲ್ಲಿ ವ್ಯಾಪಕ ಅಕ್ರಮವಿದೆ ಎಂದು ಕೆ ಸುರೇಂದ್ರನ್ ಹೇಳಿದ್ದಾರೆ. ಮತ್ತು ಚುನಾವಣಾ ಆಯೋಗವು ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು. ಸಿಪಿಎಂ ಬೂತ್ ಮಟ್ಟದ ಅಧಿಕಾರಿಗಳನ್ನು ಉರುಳಿಸಲು ಪ್ರಯತ್ನಿಸುತ್ತಿದೆ ಎಂದರು.
ಎಷ್ಟು ಅಂಚೆ ಮತಪತ್ರಗಳಿವೆ? ಎಷ್ಟು ಮತದಾನ ಮಾಡಲಾಗಿದೆ. ಎಷ್ಟು ಶೇಕಡಾವಾರು ಮತ ಚಲಾವಣೆಯಾಗಿದೆ ಎಂಬುದನ್ನು ಆಯೋಗವು ಸಂಕಲಿಸಿ, ಸಂಗ್ರಹಿಸಿದ ಮಾಹಿತಿಗಳನ್ನು ಅಭ್ಯರ್ಥಿಗಳಿಗೆ ತಿಳಿಯಪಡಿಸಬೇಕು. ಅಂಚೆ ಮತಪತ್ರವನ್ನು ನಿರ್ವಹಿಸಲು ಸಿಪಿಎಂ ವಿಶೇಷ ಸಂಘಟನೆಯನ್ನು ಸ್ಥಾಪಿಸಿದೆ ಎಂದು ಕೆ ಸುರೇಂದ್ರನ್ ಆರೋಪಿಸಿದ್ದಾರೆ.