ಮಂಜೇಶ್ವರ: ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀಗುರುದೇವಾನಂದ ಸ್ವಾಮೀಜಿಯವರ ಷಷ್ಠö್ಯಬ್ರ ಸಂಭ್ರಮದ ಬಹುಮುಖಿ ಕಾರ್ಯಕ್ರಮಗಳ ಭಾಗವಾಗಿ ವಿವಿಧ ವಲಯಗಳಲ್ಲಿ ವೈವಿಧ್ಯಮಯ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳು ನಾಡಿನ ಉದ್ದಗಲ ಆಯೋಜನೆಗೊಳ್ಳುತ್ತಿದ್ದು ಇದರ ಅಂಗವಾಗಿ ಷಷ್ಠö್ಯಬ್ದ ಸಮಿತಿ ಮಂಜೇಶ್ವರ ವಲಯದ ನೇತೃತ್ವದಲ್ಲಿ ತುಳು ಭಾಷೆ, ಸಂಸ್ಕೃತಿಯ ಜಾಗೃತಿಗಾಗಿ "ತುಳು ತುಲಿಪು-ಬದ್ಕ್ ಗೊಂಜಿ ಕೈತುಡರ್" ಎಂಬ ವಿಶೇಷ ಕಾರ್ಯಕ್ರಮವನ್ನು ಇಂದು (ಏ.೧೮) ಅಪರಾಹ್ನ ೨.೩೦ ರಿಂದ ಮಂಜೇಶ್ವರ ಹೊಸಬೆಟ್ಟು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ ಜಮ್ಮದಮನೆಯಲ್ಲಿ ಹಮ್ಮಿಕೊಳ್ಳಲಾಗಿದ್ದು ಅದರ ನೇರ ಪ್ರಸಾರ ಇಲ್ಲಿದೆ.
ಕಾರ್ಯಕ್ರಮದ ಅಂಗವಾಗಿ ಅಪರಾಹ್ನ ೨.೩೦ಕ್ಕೆ ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಅವರಿಂದ ಹರಿಕಥಾ ಸಂಕೀರ್ತನಾ ಸತ್ಸಂಗ ನಡೆಯಲಿದೆ. ಬಳಿಕ ದುಶ್ಚಟಮುಕ್ತ ಸಮಾಜ-ಯುವ ಜನರ ಪಾತ್ರ ಎಂಬ ವಿಶೇಷ ವಿಚಾರ ಸಂಕಿರಣವನ್ನು ಶ್ರೀಗುರುದೇವಾನಂದ ಸ್ವಾಮೀಜಿ ದೀಪ ಪ್ರಜ್ವಲನೆಗೈದು ಉದ್ಘಾಟಿಸುವರು. ಸಾದ್ವಿ ಮಾತಾನಂದಮಯೀ ಅವರು ಆಶೀರ್ವಚನ ನೀಡುವರು. ಷಷ್ಠö್ಯಬ್ದ ಕೇಂದ್ರ ಸಮಿತಿಯ ಮುಖ್ಯ ಕಾರ್ಯದರ್ಶಿ ನವನೀತ ಶೆಟ್ಟಿ ಕದ್ರಿ ಅಧ್ಯಕ್ಷತೆ ವಹಿಸುವರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಕಾದಂಬರಿ ಪ್ರಶಸ್ತಿ ವಿಜೇತೆ ರಾಜಶ್ರೀ ಟಿ.ರೈ ಪೆರ್ಲ ಹಾಗೂ ಗೀತಾ ಸಾಹಿತ್ಯ ಸಂಭ್ರಮ ಸಾಹಿತಿ ವಿಠಲ ನಾಯಕ್ ಕಲ್ಲಡ್ಕ ಅವರುಗಳು ವಿಶೇಷ ಉಪನ್ಯಾಸ ನೀಡುವರು. ಹಿರಿಯ ಸಾಹಿತಿ, ಪತ್ರಕರ್ತ ಮಲಾರ್ ಜಯರಾಮ ರೈ ಉಪಸ್ಥಿತರಿರುವರು.ವೀಕ್ಷಿಸಿ...............ಪ್ರತಿಕ್ರಿಯಿಸಿ.