ಜಿನೀವಾ: ಮಾಂಸಾಹಾರ ಮಾರುಕಟ್ಟೆಗಳಲ್ಲಿ ಜೀವಂತ ಪ್ರಾಣಿಗಳ ಮಾರಾಟಕ್ಕೆ ನಿಷೇಧ ಹೇರಲು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಕರೆ ನೀಡಿದೆ.
ಕೋವಿಡ್ ನಂತಹ 70 ಪ್ರತಿಶತ ವೈರಲ್ ರೋಗಗಳಿಗೆ ವನ್ಯಜೀವಿ ಮೂಲವಾಗಿದೆ. ಸೋಂಕಿತ ಪ್ರಾಣಿಗಳ ದೇಹದ ದ್ರವಗಳ ಸಂಪರ್ಕದಿಂದ ಸಾಂಕ್ರಾಮಿಕ ರೋಗಗಳು ನೇರವಾಗಿ ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ವರದಿಗಳನ್ನು ಉಲ್ಲೇಖಿಸಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ವಿಶ್ವದ ದೇಶಗಳಿಗೆ ತಮ್ಮ ಮಾರುಕಟ್ಟೆಗಳನ್ನು ತಾತ್ಕಾಲಿಕವಾಗಿ ಮುಚ್ಚುವಂತೆ ಕರೆ ನೀಡಿದೆ.