ನವದೆಹಲಿ: ಪೋನ್ ಕರೆ ಮೂಲಕ ದೇಶಾದ್ಯಂತ ಲಸಿಕೆ ಸ್ಲಾಟ್ ಬುಕಿಂಗ್ ಸೌಲಭ್ಯವನ್ನು ಸ್ಥಾಪಿಸಲಾಗುತ್ತಿದೆ. ಹೊಸ ವ್ಯವಸ್ಥೆಯು ಗ್ರಾಮೀಣ ಜನತೆಯನ್ನು ಗುರಿಯಾಗಿಸಿಕೊಂಡು ವ್ಯವಸ್ಥೆಗೊಳಿಸಲಾಗಿದೆ. ಕೊರೋನಾ ವ್ಯಾಕ್ಸಿನೇಷನ್‍ಗಾಗಿ ಸ್ಲಾಟ್‍ಗಳನ್ನು ಸಹಾಯವಾಣಿ ಸಂಖ್ಯೆ 1075 ಗೆ ಕರೆ ಮಾಡಿ ಬುಕ್ ಮಾಡಬಹುದು. ಗ್ರಾಮೀಣ ಜನರು ಇಂಟರ್ನೆಟ್ ಮತ್ತು ಸ್ಮಾರ್ಟ್ ಫೆÇೀನ್‍ಗಳ ಅವಕಾಶ ಇಲ್ಲದೆ ಲಸಿಕೆ ಕಾಯ್ದಿರಿಸಲು ಸಾಧ್ಯವಾಗುತ್ತಿಲ್ಲ ಎಂದು ವ್ಯಾಪಕ ದೂರುಗಳ ಕಾರಣ ಇಂತಹ ವ್ಯವಸ್ಥೆಗೆ ಕೇಂದ್ರ ಸರ್ಕಾರ ಮುಂದಾಗಿದೆ.
ಕೊರೋನಾ ಸ್ಲಾಟ್‍ಗಳನ್ನು ಕಾಯ್ದಿರಿಸಲು ಹೊಸ ಸೌಲಭ್ಯವನ್ನು ಸ್ಥಾಪಿಸಲಾಗುತ್ತಿದೆ ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಮುಖ್ಯಸ್ಥ ಆರ್.ಎಸ್.ಶರ್ಮ ತಿಳಿಸಿರುವರು. ಲಸಿಕೆಯನ್ನು ಕೋವಿನ್ ವೆಬ್‍ಸೈಟ್ ಮೂಲಕ ಮಾತ್ರ ಕಾಯ್ದಿರಿಸಬಹುದಾಗಿರುವುದರಿಂದ, ತಾಂತ್ರಿಕ ಜ್ಞಾನ ಮತ್ತು ಸೌಲಭ್ಯಗಳನ್ನು ಹೊಂದಿರದ ಹೆಚ್ಚಿನ ಜನರು ಕೊರೋನಾ ವ್ಯಾಕ್ಸಿನೇಷನ್‍ನಿಂದ ವಂಚಿತರಾಗುತ್ತಿರುವುದು ಕಂಡುಬಂದಿದೆ. ಇದರೊಂದಿಗೆ, ಹೊಸ ಸಹಾಯವಾಣಿ ಸಂಖ್ಯೆ ಸೌಲಭ್ಯವನ್ನು ಸ್ಥಾಪಿಸಲಾಗುತ್ತಿದೆ.
ಜಿಲ್ಲಾಧಿಕಾರಿಗಳಿಂದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಯವರೆಗೆ, ಈ ಸಹಾಯವಾಣಿ ಸಂಖ್ಯೆಯ ಬಗ್ಗೆ ಗ್ರಾಮೀಣ ಜನರಿಗೆ ಅರಿವು ಮೂಡಿಸಲು ಸೂಚಿಸಲಾಗುತ್ತದೆ. ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಮುಖ್ಯಸ್ಥ ಆರ್.ಎಸ್.ಶರ್ಮಾ ಮಾತನಾಡಿ, ಗ್ರಾಮೀಣ ಜನರು ಹೆಲ್ಪ್‍ಲೈನ್ ಸಂಖ್ಯೆಗೆ ಕರೆ ಮಾಡಿ ಕೊರೋನಾ ಲಸಿಕೆ ಕಾಯ್ದಿರಿಸುವುದು ಬಹಳ ಪ್ರಯೋಜನಕಾರಿ ಎಂದಿರುವರು.